ADVERTISEMENT

‘ಬಲವಂತದ ಹೇರಿಕೆಯಿಂದ ಭಾಷೆ ಬೆಳೆಸಲು ಸಾಧ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:41 IST
Last Updated 4 ಜೂನ್ 2017, 19:41 IST
ಕಾರ್ಯಕ್ರಮದಲ್ಲಿ ಪ್ರೊ. ವಿ.ನರಹರಿ (ಎಡದಿಂದ ಎರಡನೆಯವರು), ಪ್ರೊ. ಎಲ್‌.ವಿ. ಶಾಂತಕುಮಾರಿ, ಪ್ರೊ. ಬಾಲಚಂದ್ರ ಜಯಶೆಟ್ಟಿ, ಆರ್‌.ಪರಮಶಿವನ್‌,  ಪ್ರೊ. ಸತ್ಯನಾರಾಯಣರಾವ್‌ ಅಣತಿ, ಪ್ರೊ. ಎನ್‌. ಬೋರಲಿಂಗಯ್ಯ, ಡಾ. ಶ್ಯಾಮಸುಂದರ್‌ ಬಿದರಕುಂದಿ, ಪ.ಸ. ಕುಮಾರ್‌, ಜಿ.ಎನ್‌.ನರಸಿಂಹಮೂರ್ತಿ,  ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಎನ್‌.ಕುಮಾರ್‌ (ಎಡದಿಂದ ಏಳನೆಯವರು) ಹಾಗೂ ಎಂ.ಎಚ್‌.ಕೃಷ್ಣಯ್ಯ ಇದ್ದಾರೆ	–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬಲವಂತವಾಗಿ ಹೇರುವುದರಿಂದ ಯಾವುದೇ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಹೇಳಿದರು.

ವಿ.ಸೀ. ಸಂಪದ ವತಿಯಿಂದ (ವಿ.ಸೀತಾರಾಮಯ್ಯ ಸಂಸ್ಮರಣ ವೇದಿಕೆ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಹಿರಿಯ ಸಾಧಕರಿಗೆ ಕೃತಜ್ಞತಾ ಸಮರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾಷೆಯನ್ನು ಪ್ರೀತಿಯಿಂದ ಕಲಿಸಿದಾಗ ಮಾತ್ರ ಅದು ಬೆಳವಣಿಗೆ ಹೊಂದುತ್ತದೆ. ಹೇರಿಕೆ ಮಾಡುವುದರಿಂದ ಭಾಷೆ ಬೆಳೆಯುವುದಿಲ್ಲ. ಜನಪ್ರತಿನಿಧಿಗಳು ಕುರ್ಚಿಗಳನ್ನು ಭದ್ರಪಡಿಸಿಕೊಳ್ಳಲು ಹೋರಾಡುತ್ತಾರೆ ವಿನಃ ಭಾಷೆಯನ್ನು ಉಳಿಸಲು ಇಚ್ಛಾಶಕ್ತಿ ತೋರಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ವೇದಿಕೆಯ ಗೌರವಾಧ್ಯಕ್ಷ ಪ್ರೊ. ಎಂ.ಎಚ್‌.ಕೃಷ್ಣಯ್ಯ ಮಾತನಾಡಿ, ‘ವಿ.ಸೀತಾರಾಮಯ್ಯ ಅವರು ಸಾಹಿತ್ಯ,  ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದರು. ಅಂತಹ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೂಪುಗೊಳ್ಳಬೇಕು’ ಎಂದರು.

ಸಾಧಕರಿಗೆ ಸನ್ಮಾನ: 13 ಮಂದಿ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಶಸ್ತಿಯು ತಲಾ ₹ 10,000 ನಗದು ಬಹುಮಾನ ಒಳಗೊಂಡಿದೆ.

‘ಪ್ರಚಾರಪ್ರಿಯ ಸಾಹಿತಿಗಳು’
‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳು ಇದ್ದಾರೆ. ಆದರೆ, ಕೆಲ ಸಾಹಿತಿಗಳು ಪ್ರಚಾರಪ್ರಿಯರಾಗಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಹಾತೊರೆಯುತ್ತಾರೆ’ ಎಂದು ಎನ್‌.ಕುಮಾರ್‌ ಬೇಸರ ವ್ಯಕ್ತಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.