ADVERTISEMENT

ಬಾಡಿಗೆ ಬಾಕಿ: ಪೊಲೀಸ್‌ ಕಚೇರಿ ಬೀಗಮುದ್ರೆಗೆ ಮುಂದಾದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:39 IST
Last Updated 27 ಮೇ 2016, 19:39 IST

ಬೆಂಗಳೂರು: ಪಾಲಿಕೆಯ ಒಡೆತನದ ಕಟ್ಟಡಗಳಲ್ಲಿ ಕಚೇರಿ ಹೊಂದಿರುವ ಪೊಲೀಸ್‌ ಇಲಾಖೆ ಹಾಗೂ ಎನ್‌ಸಿಸಿ ಬಾಡಿಗೆ ಪಾವತಿಸದ ಕಾರಣ ಶುಕ್ರವಾರ ಮಾರುಕಟ್ಟೆ ವಿಭಾಗದವರು ಅಧಿಕಾರಿಗಳು ಕಚೇರಿಗೆ ಬೀಗಮುದ್ರೆ ಹಾಕಲು ಮುಂದಾದರು.

15 ದಿನಗಳ ಕಾಲಾವಕಾಶ  ನೀಡುವಂತೆ ಪೊಲೀಸ್ ಅಧಿಕಾರಿಗಳು ಕೋರಿದರು. ‘15 ದಿನಗಳಲ್ಲಿ ಬಾಡಿಗೆ ಮೊತ್ತ ಪಾವತಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಎಂ.ಜಿ. ರಸ್ತೆಯಲ್ಲಿರುವ ಪಬ್ಲಿಕ್ ಯುಟಿಲಿಟಿ ಕಟ್ಟಡದಲ್ಲಿ  ಪೊಲೀಸ್ ಇಲಾಖೆ ಮತ್ತು ಎನ್‌ಸಿಸಿ ಕಚೇರಿಗೆ ಮಳಿಗೆಗಳನ್ನು ಬಾಡಿಗೆ ನೀಡಲಾಗಿತ್ತು.  ಹಲವಾರು ವರ್ಷಗಳಿಂದ ಬಾಡಿಗೆ ಮೊತ್ತ ಪಾವತಿಸದೇ ಇರುವ ಕಾರಣ ಪಾಲಿಕೆ ಮಾರುಕಟ್ಟೆ ವಿಭಾಗದಿಂದ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಪೊಲೀಸ್ ಇಲಾಖೆ ₹ 6.64 ಕೋಟಿ ಹಾಗೂ ಎನ್‌ಸಿಸಿ ಇಲಾಖೆ ₹11.13 ಲಕ್ಷ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಆಡುಗೋಡಿ ಮಾರುಕಟ್ಟೆಯಲ್ಲಿ ಪೋಲಿಸ್ ಇಲಾಖೆಯ (ಎಸಿಪಿ) ಕಚೇರಿಗೆ ಗುತ್ತಿಗೆ ನೀಡಲಾಗಿದ್ದು, ₹ 57.55 ಲಕ್ಷ ಬಾಕಿ ಉಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.