ADVERTISEMENT

ಬಿಡಿಎ ವಸತಿ ಯೋಜನೆಗೆ ಐಬಿಸಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:32 IST
Last Updated 7 ಡಿಸೆಂಬರ್ 2017, 19:32 IST
ಬಿಡಿಎ ವಸತಿ ಯೋಜನೆಗೆ ಐಬಿಸಿ ಪ್ರಶಸ್ತಿ
ಬಿಡಿಎ ವಸತಿ ಯೋಜನೆಗೆ ಐಬಿಸಿ ಪ್ರಶಸ್ತಿ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎರಡು ವಸತಿ ಯೋಜನೆಗೆ ಇಂಡಿಯನ್‌ ಬಿಲ್ಡಿಂಗ್‌ ಕಾಂಗ್ರೆಸ್‌ನ (ಐಬಿಸಿ) ಪ್ರಶಸ್ತಿ ಲಭಿಸಿದೆ.

ಕೆಂಗೇರಿ ಬಳಿಯ ಕಣಿಮಿಣಿಕೆ 2, 3ನೇ ಹಂತದ ಯೋಜನೆ ಹಾಗೂ ವೈಟ್‌ಫೀಲ್ಡ್‌ ಬಳಿಯ ದೊಡ್ಡಬನಹಳ್ಳಿ 2ನೇ ಹಂತದ ವಸತಿ ಯೋಜನೆಗೆ ‘ಉತ್ತಮ ಪರಿಸರ ಕಟ್ಟಡ’ ಪ್ರಶಸ್ತಿ ದೊರೆತಿದೆ.

ಕೇಂದ್ರ ವಸತಿ ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರು ಡಿ.22ರಂದು ನಡೆಯುವ ಐಬಿಸಿ ವಾರ್ಷಿಕ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ಕಳೆದ ವರ್ಷವೂ ಬಿಡಿಎ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಬಿಡಿಎ ಇಲ್ಲಿಯವರೆಗೆ ಒಟ್ಟು 6 ಪ್ರಶಸ್ತಿಗಳನ್ನು ಪಡೆದಿದೆ.

ADVERTISEMENT

‘ಉತ್ತಮ ಗುಣಮಟ್ಟ, ಯೋಜನೆ, ಹಸಿರು ಕಟ್ಟಡ ಹಾಗೂ ಸುಸ್ಥಿರವಾಗಿ ನಿರ್ಮಿಸಲಾದ ಕಟ್ಟಡಗಳಿಗೆ ಐಬಿಸಿ ಪ್ರಶಸ್ತಿ ನೀಡುತ್ತದೆ. ಸತತ ಮೂರು ವರ್ಷಗಳಿಂದಲೂ ಬಿಡಿಎ ಈ ಪ್ರಶಸ್ತಿಗಳನ್ನು ಪಡೆಯುತ್ತಿದೆ. ಯೋಜನೆಗಳ ಅನುಷ್ಠಾನದಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದೇ ಇದಕ್ಕೆ ಕಾರಣ. ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ನಿರಂತರ ಪ್ರಶಸ್ತಿ ಗಳಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಎನ್.ಜಿ.ಗೌಡಯ್ಯ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.