ADVERTISEMENT

ಬಿಬಿಎಂಪಿ: 419 ಬ್ಯಾಂಕ್‌ ಖಾತೆಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:43 IST
Last Updated 18 ಸೆಪ್ಟೆಂಬರ್ 2017, 19:43 IST

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ವಲಯ ವ್ಯಾಪ್ತಿಯಲ್ಲಿ 419 ಬ್ಯಾಂಕ್‌ ಖಾತೆಗಳು ಇರುವುದನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯು ಪತ್ತೆ ಮಾಡಿದೆ.

ಸಮಿತಿಯ ಅಧ್ಯಕ್ಷೆ ನೇತ್ರಾ ನಾರಾಯಣ್‌ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳ ಉಪನಿಯಂತ್ರಕರಿಂದ (ಹಣಕಾಸು) ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ 133 ಖಾತೆಗಳು ಇರುವುದಾಗಿ ವಿಶೇಷ ಆಯುಕ್ತ (ಹಣಕಾಸು) ಮನೋಜ್‌ ರಾಜನ್‌ ತಿಳಿಸಿದ್ದರು. ಆದರೆ, ಅದಕ್ಕಿಂತ ಹೆಚ್ಚಿನ ಖಾತೆಗಳು ಇರುವುದು ಕಂಡುಬಂದಿದೆ’ ಎಂದು ನೇತ್ರಾ ಹೇಳಿದರು.

ADVERTISEMENT

‘ಕೇಂದ್ರ ಕಚೇರಿಯಲ್ಲಿ 46, ದಕ್ಷಿಣ ವಲಯದಲ್ಲಿ 32, ಪಶ್ಚಿಮ ವಲಯದಲ್ಲಿ 71, ಪೂರ್ವ ವಲಯದಲ್ಲಿ 91, ಮಹದೇವಪುರ ವಲಯದಲ್ಲಿ 16, ಬೊಮ್ಮನಹಳ್ಳಿ ವಲಯದಲ್ಲಿ 17, ದಾಸರಹಳ್ಳಿ ವಲಯದಲ್ಲಿ 13, ಆರ್‌.ಆರ್‌.ನಗರ ವಲಯದಲ್ಲಿ 15, ಯಲಹಂಕ ವಲಯದಲ್ಲಿ 16, ಶಿಕ್ಷಣ ವಿಭಾಗದಲ್ಲಿ 92, ಕಂದಾಯ ವಿಭಾಗದಲ್ಲಿ 4, ಸಾಂಖ್ಯಿಕ ವಿಭಾಗದಲ್ಲಿ 4, ಅರಣ್ಯ ವಿಭಾಗದಲ್ಲಿ 2 ಬ್ಯಾಂಕ್‌ ಖಾತೆಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.

‘ಮುಖ್ಯ ಹಣಕಾಸು ಅಧಿಕಾರಿ ಹಾಗೂ ಆರೋಗ್ಯ ವಿಭಾಗದಲ್ಲಿ ಇರುವ ಖಾತೆಗಳ ಮಾಹಿತಿ ಇನ್ನೂ ಸಿಕ್ಕಿಲ್ಲ’ ಎಂದರು.

‘ಬ್ಯಾಂಕ್‌ ಖಾತೆಗಳು ಎಷ್ಟಿವೆ, ಯಾವ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ನಿಖರ ಮಾಹಿತಿಯೇ ಇಲ್ಲ. ಇದರಿಂದ ಪಾಲಿಕೆಯ ಹಣ ಎಲ್ಲಿ ಪೋಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕೆಲವರು ಬಿಬಿಎಂಪಿ ಆಯುಕ್ತರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದಾರೆ’ ಎಂದು ಸಮಿತಿಯ ಸದಸ್ಯ ಗೌತಮ್‌ ಕುಮಾರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.