ADVERTISEMENT

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2015, 12:29 IST
Last Updated 25 ಏಪ್ರಿಲ್ 2015, 12:29 IST

ಬೆಂಗಳೂರು: ಬೆಂಗಳೂರಿನಲ್ಲಿ ಸತತವಾಗಿ ಮೂರನೇ ದಿನವೂ ಮಳೆ ಸುರಿಯಿತು. ಶನಿವಾರ ಸಂಜೆ 5.15ರಿಂದ ಅರ್ಧ ಗಂಟೆ ಆಲಿಕಲ್ಲು ಸಹಿತ ಮಳೆಯಾಯಿತು.

ವಾರಾಂತ್ಯ ಹಾಗೂ ಮಳೆಯಿಂದಾಗಿ ನಗರದ ಹಲವೆಡೆ ಸಂಚಾರ ದಟ್ಟಣೆ ಕಂಡು ಬಂತು. ಸಂಜೆ ಮಳೆ ಆರಂಭವಾಗಿದ್ದರಿಂದ ಜನರು ಮನೆಗಳಿಗೆ ತೆರಳಲು ಪರದಾಡುವಂತಾಯಿತು.

ನಗರದ ಮಹಾತ್ಮ ಗಾಂಧಿ ರಸ್ತೆ, ಶಿವಾಜಿನಗರ, ಇಂದಿರಾ ನಗರ, ಸಂಪಂಗಿರಾಮ ನಗರ, ಬನಶಂಕರಿ, ರಾಜಾಜಿನಗರ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕೋಣನಕುಂಟೆಯಲ್ಲಿ ಭಾರಿ ಗಾಳಿ ಸಹಿತ ಮಳೆ ಬಿದ್ದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.