ADVERTISEMENT

ಬೆಂಗಳೂರಿನಲ್ಲಿ ‘ಬೀಫ್‌ ಫೆಸ್ಟ್‌’ಗೆ ಅನುಮತಿ ನೀಡಿಲ್ಲ: ನಗರ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 29 ಮೇ 2017, 12:08 IST
Last Updated 29 ಮೇ 2017, 12:08 IST
ಬೆಂಗಳೂರಿನಲ್ಲಿ ‘ಬೀಫ್‌ ಫೆಸ್ಟ್‌’ಗೆ ಅನುಮತಿ ನೀಡಿಲ್ಲ: ನಗರ ಪೊಲೀಸ್‌
ಬೆಂಗಳೂರಿನಲ್ಲಿ ‘ಬೀಫ್‌ ಫೆಸ್ಟ್‌’ಗೆ ಅನುಮತಿ ನೀಡಿಲ್ಲ: ನಗರ ಪೊಲೀಸ್‌   

ಬೆಂಗಳೂರು: ಹತ್ಯೆಯ (ಮಾಂಸಕ್ಕಾಗಿ) ಉದ್ದೇಶಕ್ಕೆ ಪ್ರಾಣಿಗಳ ಮಾರುಕಟ್ಟೆಗಳಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿಗೆ ನಿರ್ಬಂಧ ವಿಧಿಸಿ ಹೊರಡಿಸಿರುವ ಹೊಸ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿ ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದೇ ವಿಷಯವಾಗಿ ಬೆಂಗಳೂರಿನಲ್ಲಿ ‘ಬೀಫ್‌ ಫೆಸ್ಟ್‌’ ನಡೆಸುವ ಬಗ್ಗೆ ಸುದ್ದಿ ಹರಡಿದ್ದು, ಇದಕ್ಕೆ ಅವಕಾಶ ನೀಡಿಲ್ಲ ಎಂದು ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಟೌನ್ ಹಾಲ್ ಬಳಿ ಮೂಮೆಂಟ್ ಬೆಂಗಳೂರು ಎಂಬ ಹೆಸರಿನಲ್ಲಿ ಬೀಫ್ ಫೆಸ್ಟ್ ನಡೆಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕವಾಗಿಯೇ ಗೋಮಾಂಸ ಸೇವನೆ ಮಾಡಲು ಕೆಲ ಸಂಘಟನೆಗಳು ಮುಂದಾಗಿವೆ ಎಂದು ಮಾಧ್ಯಮಗಳ ವರದಿಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT