ADVERTISEMENT

ಬೆಳ್ಳಂದೂರು, ವರ್ತೂರು ಕೆರೆ ಪುನಶ್ಚೇತನ

‘ಡೆಕ್ಕನ್‌ ಹೆರಾಲ್ಡ್‌ ಸ್ಪಾಟ್‌ಲೈಟ್‌’ ಕಾರ್ಯಕ್ರಮದಡಿ 27ಕ್ಕೆ ಸಂವಾದ

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:03 IST
Last Updated 24 ಮೇ 2017, 20:03 IST
ಬೆಳ್ಳಂದೂರು, ವರ್ತೂರು ಕೆರೆ ಪುನಶ್ಚೇತನ
ಬೆಳ್ಳಂದೂರು, ವರ್ತೂರು ಕೆರೆ ಪುನಶ್ಚೇತನ   
ಬೆಂಗಳೂರು: ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು  ತ್ವರಿತಗತಿಯಲ್ಲಿ ಪುನರುಜ್ಜೀವನಗೊಳಿಸುವ ಸವಾಲನ್ನು ಎದುರಿಸುತ್ತಿರುವ  ಸರ್ಕಾರದ ಅಂಗಸಂಸ್ಥೆಗಳು ಈ ನಿಟ್ಟಿನಲ್ಲಿ ಅನೇಕ ಸಮಸ್ಯೆಗಳನ್ನೂ ಎದುರಿಸುತ್ತಿವೆ.  ಈ ಸಮಸ್ಯೆಗಳನ್ನು ಮೆಟ್ಟಿ ನಿಂತು ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವೇ? 
 
ಈ ವಿಚಾರಕ್ಕೆ ಸಂಬಂಧಿಸಿ  ವಿಸ್ತೃತವಾಗಿ ಹಾಗೂ ವಿವಿಧ ಆಯಾಮಗಳಿಂದ ಚರ್ಚಿಸಲು  ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ ಇದೇ 27ರಂದು ‘ಡೆಕ್ಕನ್‌ ಹೆರಾಲ್ಡ್‌ ಸ್ಪಾಟ್‌ಲೈಟ್‌’ ಕಾರ್ಯಕ್ರಮದಡಿ ವೇದಿಕೆ ಕಲ್ಪಿಸಿದೆ.
 
ಇಂದಿರಾ ನಗರದ 100 ಅಡಿ ರಸ್ತೆಯ ಈಸ್ಟ್‌ ಕಲ್ಚರಲ್‌ ಅಸೋಸಿಯೇಷನ್‌ನಲ್ಲಿ ಅಂದು ಸಂಜೆ 5ಕ್ಕೆ ‘ಬೆಳ್ಳಂದೂರು, ವರ್ತೂರು ಕೆರೆಗಳಿಗೆ ಮರುಜೀವ’ ವಿಷಯದ ಕುರಿತು ಸಂವಾದ ನಡೆಯಲಿದೆ. 
 
ಕೆರೆ ಪುನರುಜ್ಜೀವನಕ್ಕೆ ತುರ್ತಾಗಿ ಆಗಬೇಕಿರುವ ಕೆಲಸಗಳು, ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಆಗಬೇಕಾದ  ಪರಿಹಾರ ಕಾರ್ಯಗಳ ಬಗ್ಗೆ ವಿಚಾರ ಮಂಥನ ನಡೆಯಲಿದೆ.  
 
ನಾಗರಿಕರು, ಕೆರೆ ಸಂರಕ್ಷಣಾ ಕಾರ್ಯಕರ್ತರು, ಪರಿಸರತಜ್ಞರು, ವಿಜ್ಞಾನಿಗಳು ಅಭಿಪ್ರಾಯ ಮಂಡಿಸಲಿದ್ದಾರೆ.  ಈ ಸಂವಾದದಲ್ಲಿ 300ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 
 
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್‌. ನಾಯಕ್‌, ಪುಟ್ಟೇನಹಳ್ಳಿ ಸುತ್ತ ಮುತ್ತಲ ಕೆರೆಗಳ ಸುಧಾರಣಾ ಟ್ರಸ್ಟ್‌ನ ಉಷಾ ರಾಜಗೋಪಾಲನ್‌, ಎನ್‌ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಲಿಯೊ ಸಲ್ಡಾನಾ ಮಾತನಾಡಲಿದ್ದಾರೆ.
****
ನೋಂದಣಿ ಹೇಗೆ?

ಸಂವಾದದಲ್ಲಿ ಭಾಗವಹಿಸುವವರು 27ರ ಸಂಜೆ 4.30ರ ಬಳಿಕ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು.   ಆನ್‌ಲೈನ್‌ ಮೂಲಕವೂ (www.deccanherald.com/spotlight )  ನೋಂದಣಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.