ADVERTISEMENT

ಬೈಕ್ ಸವಾರ ಸಾವು

ಬಿಎಂಟಿಸಿ ಬಸ್‌ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 20:04 IST
Last Updated 20 ಏಪ್ರಿಲ್ 2014, 20:04 IST

ಬೆಂಗಳೂರು: ಅರಮನೆ ರಸ್ತೆಯ ಸಿಐಡಿ ಜಂಕ್ಷನ್‌ ಬಳಿ ಭಾನುವಾರ ಬೆಳಿಗ್ಗೆ ಬಿಎಂಟಿಸಿ ಬಸ್ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮುಬಾರಕ್ (21) ಎಂಬ ಯುವಕ ಸಾವನ್ನಪ್ಪಿದ್ದು, ಶಾರುಖ್‌ (17) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೈಸೂರು ಬ್ಯಾಂಕ್‌ ವೃತ್ತದಿಂದ ವಿಧಾನಸೌಧ ಕಡೆಗೆ ಹೋಗುತ್ತಿದ್ದ ಬಸ್‌ (ಕೆಎ 01 ಎಫ್‌ಎ 1629) ಸಿಐಡಿ ಜಂಕ್ಷನ್‌ ಬಳಿ ಬಲಕ್ಕೆ ತಿರುವು ಪಡೆಯುತ್ತಿತ್ತು. ಇದೇ ವೇಳೆ ಬಸವೇಶ್ವರ ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದ ಕಡೆಗೆ ಮುಬಾರಕ್‌ ಮತ್ತು ಶಾರುಖ್‌ ಬೈಕ್‌ನಲ್ಲಿ ಬರುತ್ತಿದ್ದರು.

ಆಗ ಚಾಲಕನ ನಿಯಂತ್ರಣ ಕಳೆದು ಕೊಂಡ ಬಸ್‌, ಬೈಕ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನೂ ಕೂಡಲೇ ಮಲ್ಲಿಗೆ ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು. ಆದರೆ, ಮುಬಾರಕ್‌ ಮಾರ್ಗಮಧ್ಯೆಯೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಶಾರುಖ್‌ನ ತಲೆಗೂ ಗಂಭೀರ ಪೆಟ್ಟು ಬಿದ್ದಿದೆ. ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸೂಚನೆಯಂತೆ ನಿಮ್ಹಾನ್ಸ್‌ಗೆ ವರ್ಗಾಯಿ ಸಲಾಗಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡುವ ಮುಬಾರಕ್ ಮತ್ತು ಶಾರುಖ್, ಹೆಗಡೆನಗರದಲ್ಲಿ ವಾಸವಾಗಿದ್ದರು.

ಸಿಗ್ನಲ್‌ಗೆ ಕಾಯದ ಸವಾರ
‘ಬೈಕ್‌ ಸವಾರ ಸಿಐಡಿ ಜಂಕ್ಷನ್‌ ಬಳಿ ಬಂದಾಗ ಕೆಂಪು ದೀಪ ಬಿದ್ದಿತ್ತು. ಸಿಗ್ನಲ್‌ಗೆ ಕಾಯದ ಅವರು ಇನ್ನೂ 26 ಸೆಕೆಂಡ್‌ಗಳು ಬಾಕಿ ಇರುವಂತೆ ಯೇ  ಬೈಕ್‌ ಓಡಿಸಿಕೊಂಡು ಮುಂದೆ ಬಂದರು. ಇದರಿಂದ ಅಪಘಾತ ಸಂಭವಿಸಿತು ಎಂದು ಬಸ್‌ ಚಾಲಕ ಆನಂದ್ ಹೇಳಿಕೆ ಕೊಟ್ಟಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆದು, ಬಸ್ಸನ್ನು ಜಪ್ತಿ ಮಾಡಲಾಗಿದೆ. ಜಂಕ್ಷನ್‌ ನಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಂದು ಹೈಗ್ರೌಂಡ್ಸ್ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.