ADVERTISEMENT

ಮತಪತ್ರ ಬಳಕೆಗೆ ಒತ್ತಾಯಿಸಿ ನಾಳೆ ನಮ್ಮೂರ ಯುವಸೇನೆಯಿಂದ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:38 IST
Last Updated 20 ಮಾರ್ಚ್ 2018, 19:38 IST

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲು ಮತಪತ್ರವನ್ನೇ (ಬ್ಯಾಲೆಟ್‌ ಪೇಪರ್‌) ಬಳಸಬೇಕು ಎಂದು ಒತ್ತಾಯಿಸಿ ಇದೇ 22ರಂದು ದಾಸರಹಳ್ಳಿಯಿಂದ ಚುನಾವಣಾ ಆಯೋಗದ ಕಚೇರಿವರೆಗೆ ರ‍್ಯಾಲಿ ನಡೆಸಲಾಗುವುದು ಎಂದು ನಮ್ಮೂರ ಯುವಸೇನೆ ತಿಳಿಸಿದೆ.

ಮಂಗಳವಾರ ಇಲ್ಲಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ಅಧ್ಯಕ್ಷ ಗೋಪಾಲಯ್ಯ, ‘ಅನೇಕ ರಾಜ್ಯಗಳಲ್ಲಿ ಮತದಾನಕ್ಕೆ ಇವಿಎಂ ಬಳಸಲಾಗಿದೆ.
ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸೇರಿದಂತೆ ಹಲವು ರಾಜಕೀಯ ನಾಯಕರು ಮತಯಂತ್ರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದರಿಂದ ಜನರಲ್ಲೂ ಗೊಂದಲ ಉಂಟಾಗಿದೆ’ ಎಂದರು.

‘ಇವಿಎಂ ತಯಾರಿಸಿದ ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ ಕಂಪನಿಯು ಮತಯಂತ್ರದಲ್ಲಿ ಅಕ್ರಮ ಮತದಾನ ಮಾಡಲು ಸಾಧ್ಯವಿಲ್ಲ ಎಂಬುದನ್ನು
ಸ್ಪಷ್ಟಪಡಿಸಬೇಕು’ ಎಂದು ಅವರುಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.