ADVERTISEMENT

ಮರಗಳ ಗಣತಿಗೆ ‘ಅದಮ್ಯ’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:31 IST
Last Updated 22 ಮೇ 2017, 19:31 IST
ಮರಗಳ ಗಣತಿಗೆ ‘ಅದಮ್ಯ’ ಆ್ಯಪ್‌
ಮರಗಳ ಗಣತಿಗೆ ‘ಅದಮ್ಯ’ ಆ್ಯಪ್‌   
ಬೆಂಗಳೂರು: ಅದಮ್ಯ ಚೇತನ ಸಂಸ್ಥೆಯು ಮರಗಳ ಸಮೀಕ್ಷೆ ಸಲುವಾಗಿ ಸಿದ್ಧಪಡಿಸಿರುವ ‘ಟ್ರೀ ಟ್ರ್ಯಾಕಿಂಗ್‌ ಕಾರ್ಡ್’ ಆ್ಯಪ್‌ ಅನ್ನು ಕೇಂದ್ರ ಸಚಿವ ಅನಂತಕುಮಾರ್‌ ಬಿಡುಗಡೆ ಮಾಡಿದರು. 
 
ಈ ವಿನೂತನ ಆವಿಷ್ಕಾರವನ್ನು ಹಸಿರು ಭಾರತ ಅಭಿಯಾನದಲ್ಲಿ ಬಳಸ ಲಾಗುತ್ತಿದೆ. ಮನುಷ್ಯ ಹಾಗೂ ಮರಗಳ ಅನುಪಾತವನ್ನು 1:1ಕ್ಕೆ ತರುವ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ. ಪ್ರಸ್ತುತ ನಗರದಲ್ಲಿ 7 ಮಂದಿಗೆ 1 ಮರದಷ್ಟು ಅನುಪಾತ ಇದೆ.  
 
ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ‘ಈ ಆ್ಯಪ್‌ ಗಿಡ ಇರುವ ತಾಣದ ಅಕ್ಷಾಂಶ ಮತ್ತು ರೇಖಾಂಶವನ್ನು ಆಧರಿಸಿ ವಿಶಿಷ್ಟ ಭೌಗೋಳಿಕ ಗುರುತನ್ನು ದಾಖಲಿಸುತ್ತದೆ.  
 
ಯಾವ ಪ್ರಭೇದದ ಗಿಡವನ್ನು ನೆಡಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಗಿಡವನ್ನು ನೆಟ್ಟವರ ವಿವರ, ಯಾವ ದಿನಾಂಕವನ್ನು ಅದನ್ನು ನೆಡಲಾಯಿತು ಎಂಬುದನ್ನು ದಾಖಲಿಸಿಕೊಳ್ಳುತ್ತದೆ. ಇದಕ್ಕೆ ಸ್ಕ್ಯಾನ್‌ ಕಾರ್ಡ್‌ ಸೌಲಭ್ಯವನ್ನು ಅಳವಡಿಸಲಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.