ADVERTISEMENT

ಮಹಿಳಾ ಸುರಕ್ಷತೆಗೆ ‘ಅವಾ’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:42 IST
Last Updated 8 ಅಕ್ಟೋಬರ್ 2015, 19:42 IST

ಬೆಂಗಳೂರು: ಬಿಎಂಎಸ್‌ ಇನ್ನೋಲ್ಯಾಬ್ಸ್ ಸಾಫ್ಟ್‌ವೇರ್‌ ಸಂಸ್ಥೆಯು ಸಪೋರ್ಟಿಂಗ್‌ ಆ್ಯಪ್‌ ‘ಸೇವ್‌ ಮೈ ಸೋಲ್‌’ ಜೊತೆಗೆ ‘ಅವಾ– ಎ ಕೀಪ್‌ ಸೇಕ್‌ ಟು ಕೀಪ್‌ ಸೇಫ್‌’  ವೈಯಕ್ತಿಕ ಸುರಕ್ಷಾ ಸಾಧನವನ್ನು ಬಿಡುಗಡೆ ಮಾಡಿದೆ. ನಗರದಲ್ಲಿ ಗುರುವಾರ ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್‌. ಪಾಟೀಲ್‌ ಆ್ಯಪ್‌ ಬಿಡುಗಡೆ ಮಾಡಿದರು.

ಬಿಎಂಎಸ್‌ ಇನ್ನೋಲ್ಯಾಬ್ಸ್‌ ವ್ಯವಸ್ಥಾಪಕ ನಿರ್ದೇಶಕ ಗೌತಮ್‌ ಕಲತ್ತೂರು ಮಾತನಾಡಿ, ‘ನಗರದಲ್ಲಿ ಅವಾ ಸಾಧನದ ವಿನ್ಯಾಸ ರೂಪಿಸಿ ಅಭಿವೃದ್ಧಿ ಹಾಗೂ ತಯಾರಿಕೆ ಮಾಡಲಾಗಿದೆ. ಇದು ಬ್ಲೂಟೂಥ್‌ ಲೋ ಎನರ್ಜಿ (ಬಿಎಲ್‌ಇ) ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ. ‘ಸಮಾಜ ವಿರೋಧಿ ಶಕ್ತಿಗಳಿಗೆ ಹೆಚ್ಚು ಬಲಿಯಾಗುವವರು ಮಹಿಳೆಯರು ಹಾಗೂ ವಿದ್ಯಾರ್ಥಿಗಳು. ಅವರಿಗೆ ನೆರವಾಗಲು ಈ ಸಾಧನ ಸಿದ್ಧಪಡಿಸಲಾಗಿದೆ.

ಮಾರಾಟಕ್ಕಾಗಿ ಸಂಸ್ಥೆ ಫ್ಲಿಪ್‌ ಕಾರ್ಟ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಸಾಧನದ ದರ ₹3,500. ಅಕ್ಟೋಬರ್‌ 30ರ ವರೆಗೆ ರಿಯಾಯಿತಿ ದರದಲ್ಲಿ (₹2,999) ಮಾರಾಟ ಮಾಡಲಾಗುವುದು’ ಎಂದರು. ‘ಏಕೈಕ ಬಟನ್‌ ಹೊಂದಿರುವ ‘ಅವಾ’ ವ್ಯಕ್ತಿಯ ಸ್ಮಾರ್ಟ್‌ಫೋನ್‌ನ ಸೇವ್‌ ಮೈ ಸೋಲ್‌ ಮೊಬೈಲ್‌ ಅಪ್ಲಿಕೇಷನ್‌ನೊಂದಿಗೆ ಪೇರ್‌ ಆಗುತ್ತದೆ. 

ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವಾದಲ್ಲಿರುವ  ಬಟನ್‌ ಆಕ್ಟಿವೇಟ್‌ ಮಾಡಬೇಕು. ಕೂಡಲೇ ವ್ಯಕ್ತಿ ಇರುವ ಜಾಗವನ್ನು ಪತ್ತೆ ಹಚ್ಚುತ್ತದೆ. ತುರ್ತು ಸಂಪರ್ಕ ಸಂಖ್ಯೆಗೆ ಅಂದರೆ ಆತ್ಮೀಯರಿಗೆ ಸ್ಥಳದ ಮಾಹಿತಿ ರವಾನಿಸುತ್ತದೆ. ವ್ಯಕ್ತಿ ಅಪಾಯದಲ್ಲಿದ್ದಾಗ ಜೋರಾಗಿ ಕೂಗುವಂತಹ ಫೀಚರ್‌ ಕೂಡಾ ಇದರಲ್ಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.