ADVERTISEMENT

ಮಾದರಿ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎಚ್.­ವಘೇಲಾ ಹಾಗೂ ನ್ಯಾಯಮೂರ್ತಿ ಆರ್.ಬಿ.­ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ಈ ಕುರಿತ ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿತು.

ಈ ಸಂದರ್ಭದಲ್ಲಿ ಬಿಬಿಎಂಪಿ ಪರ ವಕೀಲರು, ನಗರದಲ್ಲಿ ಮೂರು ಮಾದರಿ ರಸ್ತೆಗಳನ್ನು ನಿರ್ಮಿಸುವ ಕುರಿತಂತೆ ನ್ಯಾಯಪೀಠಕ್ಕೆ ಜ್ಞಾಪನಾ (ಮೆಮೊ) ಪತ್ರ ಸಲ್ಲಿಸಿದರು.

ಮಾದರಿ ರಸ್ತೆಗಳು: ಕಬ್ಬನ್‌ ರಸ್ತೆ–ಡಿಕನ್ಸನ್ ರಸ್ತೆ­ಯಿಂದ ಸೆಂಟ್ರಲ್ ಸ್ಟ್ರೀಟ್ ವರೆಗೆ, ರೇಸ್ ಕೋರ್ಸ್ ರಸ್ತೆ–ಚಾಲುಕ್ಯ ಹೋಟೆಲ್‌ನಿಂದ ಶಿವಾನಂದ ಸರ್ಕಲ್‌­ವರೆಗೆ ಹಾಗೂ ಸ್ಯಾಂಕಿ ರಸ್ತೆ–ವಿಂಡ್ಸರ್ ಮ್ಯಾನರ್ ರಸ್ತೆಯಿಂದ ರಾಜಭವನ್ ಜಂಕ್ಷನ್‌ವರೆಗಿನ ಮೂರು ರಸ್ತೆಗಳನ್ನು ಮಾದರಿ ರಸ್ತೆ­ಗಳನ್ನಾಗಿ ರೂಪಿಸಲಾ­ಗುವುದು ಎಂದು ಈ ಪತ್ರದಲ್ಲಿ ವಿವರಿಸಲಾಗಿದೆ.

ಈ ರಸ್ತೆಗಳಲ್ಲಿ ಪಾದಚಾರಿ ಮಾರ್ಗ, ವಾಹನ ನಿಲುಗಡೆಯ ಸ್ಥಳ ಗಳು  ಸೂಕ್ತವಾಗಿ ಇರುವಂತೆ ನೋಡಿ­ಕೊಳ್ಳ­-ಲಾಗುವುದು ಎಂದು ಹೇಳಲಾಗಿದೆ.

‘ಹದಿನೈದು ದಿನಗಳಲ್ಲಿ ಈ ಮಾದರಿ ರಸ್ತೆಗಳನ್ನು ಪೂರ್ಣ ಗೊಳಿಸುವ ದಿಸೆಯಲ್ಲಿ ಪ್ರಯತ್ನಿಸಿ. ನಗರದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ಪ್ರಮಾಣ ಇಳಿಕೆಯಾ­ಗುವಂತೆ ಬಿಬಿಎಂಪಿಯ ಎಲ್ಲಾ ವಿಭಾ­ಗಗಳೂ ಸರಿಯಾಗಿ ನಿಗಾ ವಹಿಸ­ಬೇಕು. ಇದಕ್ಕಾಗಿ ಕಾಲಮಿತಿಯಲ್ಲಿ ಕೆಲಸ ಮಾಡಬೇಕು’ ಎಂದು ಪೀಠವು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.