ADVERTISEMENT

ಮೋದಿ ನಗರಕ್ಕೆ: ಸಂಚಾರ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:30 IST
Last Updated 1 ಏಪ್ರಿಲ್ 2015, 20:30 IST

ಬೆಂಗಳೂರು: ನಗರದಲ್ಲಿ ಏಪ್ರಿಲ್ 3ರಂದು ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ, ಬಳಿಕ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವುದರಿಂದ ‌ವಿವಿಧ  ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಏಕಮುಖ  ಸಂಚಾರ: ಪಂಪಮಹಾಕವಿ ರಸ್ತೆ, ವಾಣಿ ವಿಲಾಸ್‌ ರಸ್ತೆ ಜಂಕ್ಷನ್‌ನಿಂದ ಉತ್ತರಾಧಿಮಠ ರಸ್ತೆ ಮತ್ತು ವಾಣಿ ವಿಲಾಸ್‌ ರಸ್ತೆ ಜಂಕ್ಷನ್‌ ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರ್ಗ ಬದಲಾವಣೆ: ಕೆ.ಆರ್.ರಸ್ತೆ, ನ್ಯಾಷನಲ್‌ ಕಾಲೇಜು ಜಂಕ್ಷನ್‌ನಿಂದ ಪ್ರೊ.ಶಿವಶಂಕರ್‌ ವೃತ್ತದ ಕಡೆಗೆ ಸಾಗುವ ಬಿಎಂಟಿಸಿ ಬಸ್‌ಗಳು  ಡಯಾಗ್ನಲ್ ರಸ್ತೆ, ಸಜ್ಜನರಾವ್‌ ವೃತ್ತದಲ್ಲಿ ಸಾಗಿ ಕೊಂಡಜ್ಜಿ ಬಸಪ್ಪ ವೃತ್ತದಲ್ಲಿ ಎಡ ತಿರುವುದು ಪಡೆದು ಪ್ರೊ.ಶಿವಶಂಕರ್‌ ವೃತ್ತದ ಕಡೆಗೆ ಸಾಗಬಹುದಾಗಿದೆ.

ಕೆ.ಆರ್.ರಸ್ತೆ, ಶಿವಶಂಕರ್‌ ವೃತ್ತದಿಂದ ನ್ಯಾಷನಲ್ ಕಾಲೇಜು ವೃತ್ತದ ಕಡೆಗೆ ಸಂಚರಿಸುವ ಬಸ್‌ಗಳು ಶಿವಶಂಕರ್‌ ವೃತ್ತದಲ್ಲಿ ಎಡ ತಿರುವು ಪಡೆದು  ಕೊಂಡಜ್ಜಿ ಬಸಪ್ಪ ವೃತ್ತದಲ್ಲಿ ಬಲ ತಿರುವು ಪಡೆದು ಸಜ್ಜನ್‌ರಾವ್‌ ವೃತ್ತ, ವಾಣಿ ವಿಲಾಸ್‌ ರಸ್ತೆ, ಶೇಷ್‌ ಮಹಲ್‌ ಜಂಕ್ಷನ್‌, ಹೋಮ್ ಸ್ಕೂಲ್‌ ಜಂಕ್ಷನ್‌ನಲ್ಲಿ ಸಾಗಿ ಆರ್ಮುಗಂ ವೃತ್ತದಲ್ಲಿ ಬಲ ತಿರುವು ಪಡೆದು ಡಿ.ಎಂ.ಜಂಕ್ಷನ್‌ ಮೂಲಕ ಕೆ.ಆರ್.ರಸ್ತೆ ತಲುಪಬಹುದಾಗಿದೆ.

ವಾಹನ ನಿಲುಗಡೆ: ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ಬುಲ್‌ ಟೆಂಪಲ್‌ ರಸ್ತೆಯ ಮರಾಠ ಹಾಸ್ಟೆಲ್ ಆವರಣ, ಉದಯಭಾನು ಆಟದ ಮೈದಾನ, ಹಯವದನರಾವ್‌ ರಸ್ತೆಯ ಕೊಹಿನೂರ್‌ ಆಟದ ಮೈದಾನ ಮತ್ತು ಜಯನಗರ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.