ADVERTISEMENT

‘ಮೌಲ್ಯ ಕಳೆದುಕೊಳ್ಳುತ್ತಿವೆ ಸರ್ಕಾರದ ಪ್ರಶಸ್ತಿಗಳು’

​ಪ್ರಜಾವಾಣಿ ವಾರ್ತೆ
Published 23 ಮೇ 2017, 20:04 IST
Last Updated 23 ಮೇ 2017, 20:04 IST
ಬೆಂಗಳೂರು: ‘ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಸ್ಪಷ್ಟವಾದ ನೀತಿ, ನಿಯಮ, ಮಾನದಂಡಗಳಿಲ್ಲ. ಇದರಿಂದ ಅವು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ’ ಎಂದು  ನಟ ರಾಜೇಶ್ ವಿಷಾದ ವ್ಯಕ್ತಪಡಿಸಿದರು.
 
ಹಂಸಜ್ಯೋತಿ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ ‘ಹಂಸ ವಸಂತ ಋತು ಸಂಭ್ರಮ ಹಾಗೂ ಹಂಸ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಮಾತನಾಡಿದರು.
 
‘ಪ್ರಶಸ್ತಿಗಳಿಗೆ ಅನರ್ಹರು ಆಯ್ಕೆಯಾಗುತ್ತಿದ್ದಾರೆ. ಅವರಿಂದಲೇ ಪ್ರಶಸ್ತಿಗಳು ಮಾರಾಟದ ವಸ್ತುಗಳಂತಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು. 
 
‘ಹಂಸಕ್ಷೀರ ನ್ಯಾಯದಂತೆ ನಾವು ನಡೆದುಕೊಳ್ಳಬೇಕು. ಆತ್ಮಸಾಕ್ಷಿ ಯಂತೆ ಕಾರ್ಯ ನಿರ್ವಹಿಸಬೇಕು. ಇದರಿಂದ ಸಿಗುವ ನೆಮ್ಮದಿ, ಗೌರ ವವೇ ಶ್ರೇಷ್ಠವಾದದ್ದು’ ಎಂದರು.
 
ಸಂಸ್ಥೆಯ ಅಧ್ಯಕ್ಷ ಜಿ.ಶ್ರೀಕಾಂತ್‌ ಮಾತನಾಡಿ, ‘ಎಲೆಮರೆ ಕಾಯಿ ಯಂತೆ ಸೇವೆ ಸಲ್ಲಿಸುತ್ತಿ ರುವವರನ್ನು ಗುರುತಿಸಿ ಗೌರವಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.