ADVERTISEMENT

ರಾಜಧಾನಿಯಲ್ಲಿ ಮಳೆ ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:52 IST
Last Updated 3 ಮಾರ್ಚ್ 2015, 19:52 IST
ಬಿಸಿಲು ಹಾಗೂ ತುಂತುರು ಮಳೆಯ ಕಣ್ಣಾಮುಚ್ಚಾಲೆ ನಡುವೆ ನಗರದ ಸಿ.ಎನ್‌.ಆರ್‌. ವೃತ್ತದ ಬಳಿ ಯುವತಿಯರು ಸಾಗಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದ  ರೀತಿ.
ಬಿಸಿಲು ಹಾಗೂ ತುಂತುರು ಮಳೆಯ ಕಣ್ಣಾಮುಚ್ಚಾಲೆ ನಡುವೆ ನಗರದ ಸಿ.ಎನ್‌.ಆರ್‌. ವೃತ್ತದ ಬಳಿ ಯುವತಿಯರು ಸಾಗಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದ ರೀತಿ.   

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಏಳು ಮರಗಳು ಧರೆ­ಗುರುಳಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ರಾತ್ರಿ 8.15ಕ್ಕೆ ಆರಂಭವಾದ ಮಳೆು 11.30ರವರೆಗೆ ಸುರಿಯಿತು. ಜೆ.ಪಿ.ನಗ­ರದ 33ನೇ ಅಡ್ಡರಸ್ತೆ, ಬಾಷ್ಯಂ ವೃತ್ತ, ಪದ್ಮನಾಭ­ನಗರ 13ನೇ ಮುಖ್ಯರಸ್ತೆ, ರಾಜ­ರಾಜೇಶ್ವರಿ­ನಗರ ಸಮೀಪದ ಐಡಿಯಲ್ ಹೋಮ್ಸ್‌, ಮತ್ತೀಕೆರೆ 9ನೇ ಅಡ್ಡರಸ್ತೆ, ಎಚ್‌ಎಂಟಿ ಲೇಔಟ್‌ ಸೇರಿ ವಿವಿಧೆಡೆ ಮರಗಳು ಧರೆಗುರುಳಿದವು.

ಪದ್ಮನಾಭನಗರ, ಕಮಲಮ್ಮನ­ಗುಂಡಿ, ಪರಿಮಳ­ನಗರ, ಶಿವನಗರ, ಕುರುಬರ­ಹಳ್ಳಿ, ಪ್ರಕಾಶ್‌ನಗರ ನಾಲ್ಕನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ರಾಮಮೂರ್ತಿನಗರ, ವಿಜಿನಾಪುರ, ಕವದೇನಹಳ್ಳಿ, ಮಂಗಮ್ಮನ­ಪಾಳ್ಯ, ಕಗ್ಗದಾಸನಪುರ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

‘ನಗರದದಲ್ಲಿ 10.2 ಮಿ.ಮೀ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತ 23.8 ಮಿ.ಮೀ ಮಳೆಯಾಗಿದೆ’ ಎಂದು ಹವಮಾನ ಇಲಾಖೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.