ADVERTISEMENT

ಲಕ್ಷ್ಮಿದೇವಿ ಪುತ್ಥಳಿ ಸ್ಥಾಪನೆ: ಮೇಯರ್‌

ಸಂಕಲ್ಪ–2017 ಕಾರ್ಯಕ್ರಮದಲ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:56 IST
Last Updated 22 ಜನವರಿ 2017, 19:56 IST
ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಮೇಯರ್ ಜಿ.ಪದ್ಮಾವತಿ ಅವರು ಪುಷ್ಪನಮನ ಸಲ್ಲಿಸಿದರು. ಚಲನಚಿತ್ರ ನಿರ್ಮಾಪಕ ಪ್ರಕಾಶಗೌಡ, ಲಯನ್ಸ್‌ ಕ್ಲಬ್‌ ಆಫ್ ಬೆಂಗಳೂರು (ಪ್ರಶಾಂತನಗರ) ಅಧ್ಯಕ್ಷ ಎಚ್.ಅರುಣ್ ಕುಮಾರ್ ಶೆಟ್ಟಿ, ಲಯನ್ಸ್‌ ಕ್ಲಬ್ ಆಫ್ ಬೆಂಗಳೂರು (ಚಂದನ) ಅಧ್ಯಕ್ಷ ಶಿವ ಮಳಿಗೆ, ಅಕಾಡೆಮಿಯ ನಿರ್ದೇಶಕ ಎಚ್.ಎಂ.ಪ್ರಕಾಶ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಎನ್.ನಟರಾಜ್‌ಗೌಡ ಇದ್ದರು  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಸೊಸೆ ಲಕ್ಷ್ಮಿದೇವಿ  ಪುತ್ಥಳಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಆವರಣದಲ್ಲಿ ಸ್ಥಾಪನೆ ಮಾಡಲಾಗುವುದು’ ಎಂದು ಮೇಯರ್ ಜಿ.ಪದ್ಮಾವತಿ ಅವರು ಹೇಳಿದರು.
 
ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ ಆ್ಯಂಡ್ ಕಮ್ಯುನಿಕೇಷನ್ (ಬಿಎಎಲ್‌ಸಿ) ಸಂಸ್ಥೆ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಸಂಕಲ್ಪ–2017  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದಾರೆ ನಿಜ. ಆದರೆ, ಇದಕ್ಕೆ ಸ್ಫೂರ್ತಿ ಅವರ ಸೊಸೆ ಮಹಾನ್ ತ್ಯಾಗಮಯಿ ಲಕ್ಷ್ಮಿದೇವಿ. ಬೆಂಗಳೂರು ಕಟ್ಟಲು ಅವರು  ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕೆಂಪೇಗೌಡರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಲಕ್ಷ್ಮಿದೇವಿ ಅವರ ತ್ಯಾಗದ ಬಗ್ಗೆ ಯಾರೂ ಮಾತಾಡಲ್ಲ. ಹೆಚ್ಚಿನ ಜನರಿಗೆ ಇವರ ಬಗ್ಗೆ ತಿಳಿದೇ ಇಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.