ADVERTISEMENT

ವಕೀಲರು ರಾಜಕೀಯದಿಂದ ದೂರವಿರಬೇಕು

ಹಿರಿಯ ನ್ಯಾಯವಾದಿ ಫಾಲಿ ಎಸ್‌. ನಾರಿಮನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ಬೆಂಗಳೂರು: ‘ವಕೀಲರು ತಮ್ಮ ಸುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ರೂಢಿಸಿ ಕೊಳ್ಳಬೇಕು ಮತ್ತು ವೃತ್ತಿಯ ಆರಂಭದ ದಿನಗಳಲ್ಲಿ ರಾಜಕೀಯ ಚಟುವಟಿಕೆಗ ಳಿಂದ  ಸಾಧ್ಯವಾದಷ್ಟು ದೂರವಿ ರಬೇಕು’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್‌.ನಾರಿಮನ್‌ ಯುವ ವಕೀಲರಿಗೆ ಕಿವಿಮಾತು ಹೇಳಿದರು.

ಹೊಸಾದಾಗಿ ನೋಂದಾಯಿತರಾದ 103 ವಕೀಲರಿಗೆ ಶುಕ್ರವಾರ ರಾಜ್ಯ ವಕೀಲರ ಪರಿಷತ್‌ನಲ್ಲಿ ಸನ್ನದು ವಿತರಿಸಿ ಅವರು ಮಾತನಾಡಿದರು. ‘ಸತತ ಓದು ಮತ್ತು ಕಠಿಣ ಪರಿಶ್ರಮದಿಂದ ಉತ್ತಮ ವಕೀಲರಾಗಲು ಸಾಧ್ಯ ವಿದೆ  ಎಂದರು.

ಪರಿಷತ್‌ ವತಿಯಿಂದ ನಾರಿಮನ್‌ ಅವರಿಗೆ ‘ವಕೀಲ ಕ್ಷೇತ್ರದ ಭೀಷ್ಮ’ ಎಂಬ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಪಿ.ಪಿ.ಹೆಗ್ಡೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.