ADVERTISEMENT

ವನ್ಯಜೀವಿ ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:50 IST
Last Updated 18 ಸೆಪ್ಟೆಂಬರ್ 2017, 19:50 IST
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಚಿತ್ರ ಬಿಡಿಸಿದರು  –ಪ್ರಜಾವಾಣಿ ಚಿತ್ರ
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಚಿತ್ರ ಬಿಡಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅರಣ್ಯ ಇಲಾಖೆ 63ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ನಗರದಲ್ಲಿ ಭಾನುವಾರ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಚಿತ್ರ ರಚನಾ ಮತ್ತು ಪ್ರಬಂಧ ಬರಹ’ ಸ್ಪರ್ಧೆಗಳನ್ನು ಆಯೋಜಿಸಿತ್ತು.

ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ರಕ್ಷಣೆ, ವನ್ಯಜೀವಿಗಳ ಅಗತ್ಯ, ಹವಾಮಾನ ವೈಪರೀತ್ಯದ ದುಷ್ಪರಿಣಾಮದ ಕುರಿತ ಚಿತ್ರಗಳನ್ನು ಮಕ್ಕಳು ಬಿಡಿಸಿದರು.

ಪರಿಸರ ಸಮತೋಲನದ ಕುರಿತು ಪ್ರಬಂಧಗಳನ್ನು ರಚಿಸಿದರು. ಹಾಗೆಯೇ ಅರಣ್ಯ ಇಲಾಖೆಯ ಅಧಿಕಾರಿಗಳಾದ ಪುನ್ನಟಿ ಶ್ರೀಧರ್‌, ಸಿ.ಜಯರಾಮ್‌, ಸಾಸ್ವತಿ ಮಿಶ್ರಾ ಅವರಿಂದ ಕಾಡಿನ ಕುರಿತ ಸ್ವಾರಸ್ಯಕರ ಮಾಹಿತಿಗಳನ್ನು ತಿಳಿದುಕೊಂಡರು. ಅರೋಚಾ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಕಾಡು, ಅರಣ್ಯನಾಶ, ವನ್ಯಜೀವಿ ಮತ್ತು ಮಾನವ ಸಂಘರ್ಷದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

ADVERTISEMENT

ಸಪ್ತಾಹದ ಪ್ರಯುಕ್ತ ಅಕ್ಟೋಬರ್‌ 2ರಂದು ಬೆಳಿಗ್ಗೆ 7ಗಂಟೆಗೆ ಹೈಕೋರ್ಟ್‌ ಮುಂಭಾಗದಿಂದ ಲಾಲ್‌ಬಾಗ್‌ವರೆಗೂ ‘ವನ್ಯಜೀವಿಗಳಿಗಾಗಿ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿತ್ರ ಮತ್ತು ಪ್ರಬಂಧ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಕ್ಟೋಬರ್‌ 9ರಂದು ನಡೆಯುವ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.