ADVERTISEMENT

ಶ್ರೀನಿವಾಸ್‌ ಆಸ್ಪತ್ರೆಯಿಂದ ಮನೆಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:20 IST
Last Updated 17 ಫೆಬ್ರುವರಿ 2017, 19:20 IST
ಬೆಂಗಳೂರು: ಶೂಟೌಟ್‌ನಿಂದ ಗಾಯಗೊಂಡಿದ್ದ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ.
 
ಯಲಹಂಕ ಸಮೀಪದ ಕೋಗಿಲು ಕ್ರಾಸ್‌ ಸಿಗ್ನಲ್‌ನಲ್ಲಿ ಫೆ. 3ರಂದು ನಡೆದಿದ್ದ  ಘಟನೆಯಲ್ಲಿ ಗಾಯಗೊಂಡಿದ್ದ  ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ದೇಹದಲ್ಲಿದ್ದ ಮೂರು ಗುಂಡುಗಳನ್ನು ಹೊರತೆಗೆದಿದ್ದ ವೈದ್ಯರು, ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು.
 
‘ಶ್ರೀನಿವಾಸ್‌ ಅವರ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ಯಾವುದೇ ಸಮಸ್ಯೆ ಇಲ್ಲದಿದ್ದರಿಂದ  ಅವರನ್ನು ಶುಕ್ರವಾರ ಸಂಜೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದಿದ್ದೇವೆ. ಬಸವೇಶ್ವರನಗರದಲ್ಲಿರುವ ಅವರ ಮನೆಗೆ ಭದ್ರತೆ ಒದಗಿಸುವಂತೆ ಅಲ್ಲಿಯ ಪೊಲೀಸರಿಗೆ ತಿಳಿಸಿದ್ದೇವೆ’ ಎಂದು ಯಲಹಂಕ ಠಾಣೆಯ  ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.