ADVERTISEMENT

ಸಂಚಾರ ನಿಯಮ ಉಲ್ಲಂಘಿಸಿದ 648 ಆಟೊ ಜಪ್ತಿ

ಪ್ರಯಾಣಿಕರ ವೇಷದಲ್ಲಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:55 IST
Last Updated 26 ಸೆಪ್ಟೆಂಬರ್ 2016, 19:55 IST
ಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ ಆಟೊಗಳು
ಜಯನಗರ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ ಆಟೊಗಳು   

ಬೆಂಗಳೂರು: ನಗರದಲ್ಲಿ ಸೋಮವಾರ ಪ್ರಯಾಣಿಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 648 ಆಟೊಗಳನ್ನು ಜಪ್ತಿ ಮಾಡಿದರು.

‘ಮೆಜೆಸ್ಟಿಕ್‌, ಚಿಕ್ಕಪೇಟೆ, ಉಪ್ಪಾರಪೇಟೆ, ಜಯನಗರ, ಬನಶಂಕರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 943ಕ್ಕೂ ಹೆಚ್ಚು ಆಟೊಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ ಎಲ್ಲ ಠಾಣೆ ವ್ಯಾಪ್ತಿಯಲ್ಲಿ 648 ಆಟೊ ಜಪ್ತಿ ಮಾಡಲಾಗಿದೆ’ ಎಂದು ಹಿರಿಯ  ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಯಾಣಿಕರು ಕರೆದ ಕಡೆ ಬಾಡಿಗೆಗೆ ಹೋಗದಿರುವುದು ಹಾಗೂ ಹೆಚ್ಚಿನ ಬಾಡಿಗೆಗೆ ಒತ್ತಾಯಿಸುತ್ತಿದ್ದ ಬಗ್ಗೆ ಆಟೊ ಚಾಲಕರ ವಿರುದ್ಧ ದೂರುಗಳು ಬಂದಿದ್ದವು. ಹೀಗಾಗಿ ಪ್ರಯಾಣಿಕರ ವೇಷದಲ್ಲಿ 100ಕ್ಕೂ ಹೆಚ್ಚು ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದರು’ ಎಂದು ಮಾಹಿತಿ ನೀಡಿದರು.

‘ಪ್ರಕರಣ ದಾಖಲಾದ ಬಳಿಕ ದಂಡ ಪಾವತಿಸುವಂತೆ ಆಟೊ ಚಾಲಕರಿಗೆ ಸೂಚಿಸಲಾಗಿದೆ. ಅವರು ನ್ಯಾಯಾಲಯದಲ್ಲಿ ದಂಡ ಪಾವತಿಸಿ ಆಟೊ ಬಿಡಿಸಿಕೊಂಡು ಹೋಗಬೇಕು. ಜತೆಗೆ ಇಂಥ ಕಾರ್ಯಾಚರಣೆಯಲ್ಲಿ ಮುಂದುವರೆಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.