ADVERTISEMENT

ಸಂಸ್ಕೃತಿ ಇಲಾಖೆಯಿಂದ ಹಾಳಾದ ನಾಟಕ

ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ವಿಷಾದ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 20:18 IST
Last Updated 29 ಜುಲೈ 2014, 20:18 IST

ಬೆಂಗಳೂರು:‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಚಿತ ನಾಟಕ ತೋರಿಸುವ ಸಂಸ್ಕೃತಿ ಆರಂಭಿಸಿದ್ದರಿಂದ ನಾಟಕಗಳು ಹಾಳಾಗುತ್ತಿವೆ’ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರು ವಿಷಾದ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಯಕ್ಷ ಕೌಮುದೀ ಟ್ರಸ್ಟ್ ಆಯೋಜಿಸಿದ್ದ ಅಖಿಲ ಕರ್ನಾಟಕ ಯಕ್ಷ ಪರ್ಯಟನ –1 ತಾಳಮದ್ದಳೆ ಪ್ರದರ್ಶನಗಳ ಸಮಾ ರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಲಾಖೆಯ ಈ ಸಂಸ್ಕೃತಿಯಿಂದ ಕನ್ನಡ ನಾಟಕಗಳಿಗೆ ಗೌರವ ಪ್ರವೇಶ ಪತ್ರದ ಪ್ರೇಕ್ಷಕರೇ ಹೆಚ್ಚಾಗಿದ್ದಾರೆ. ಆದರೆ, ಈ ಬಿಸಿ ಯಕ್ಷಗಾನ ಕಲೆಗೆ ತಟ್ಟಿಲ್ಲ. ಅಲ್ಲಿ ಟಿಕೆಟ್‌ ಖರೀದಿಸಿ ದುಂಬಾಲು ಬಿದ್ದು ನೋಡುವ ಪ್ರೇಕ್ಷಕರು ಇನ್ನೂ ಅಧಿಕವಾಗಿದ್ದಾರೆ’ ಎಂದು ಹೇಳಿದರು. ‘ಟಿವಿ ಎಂಬ ಸಾಂಕ್ರಾಮಿಕ ರೋಗದ ಹಿಡಿತಕ್ಕೆ ಯಕ್ಷಗಾನ  ಸಿಗದ ಕಾರಣ ಟಿಕೆಟ್ ಪಡೆದು ಅದನ್ನು ಮುಗಿಬಿದ್ದು ನೋಡುವ ಜನರಿದ್ದಾರೆ.  ಟಿಕೆಟ್ ಪಡೆಯುವ ಪ್ರೇಕ್ಷಕ ಎಲ್ಲಿಯವರೆಗೆ ಇರುತ್ತಾನೊ ಅಲ್ಲಿಯವರೆಗೆ ಮಾತ್ರ ಕಲೆ ಬದುಕುತ್ತದೆ’ ಎಂದು ಅಭಿಪ್ರಾ ಯಪಟ್ಟರು.

‘ಅನೇಕ ದೇವಸ್ಥಾನಗಳಲ್ಲಿ ಇರುವ ದೊಡ್ಡ ಯಕ್ಷಗಾನ ಮೇಳಗಳು ಹರಕೆ ಮತ್ತು ಸಂಬಳದಂತ ಸವಲತ್ತು ಗಳಿಂದಾಗಿ  ಸೃಜನಶೀಲತೆ ಯಲ್ಲಿ ಸೊರ ಗುತ್ತಿವೆ. ಅವು ಹೊಸತನ ಮೈಗೂಡಿ ಸಿಕೊಳ್ಳದಿದ್ದರೆ ಸಾಂಸ್ಕೃತಿಕ ವಾಗಿ ಸಮೃದ್ಧವಾದ ಈ ಕಲೆಗೆ ಹಿನ್ನಡೆ ಯಾಗುತ್ತದೆ’ ಎಂದು ತಿಳಿಸಿದರು.

ಮತ್ತೊರ್ವ ರಂಗಕರ್ಮಿ ಎಚ್. ಜಿ.ಸೋಮಶೇಖರ ರಾವ್ ಮಾತನಾಡಿ, ‘ಯಕ್ಷಗಾನವನ್ನು ಅಳಿವಿನ ಅಂಚಿನ ಲ್ಲಿರುವ ಕಲೆ ಎಂದು ಹೇಳುವುದು  ಕೇಳಿ ಸಾಕಾಗಿದೆ. ಪರಂಪರೆ ಮತ್ತು ಪ್ರಾಚೀ ನತೆ ಹೊಂದಿ ರುವ ರೋಚಕವಾದ ಈ ಕಲೆಗೆ ಸಾವಿಲ್ಲ. ಮರಾಠಿ ರಂಗಭೂಮಿ ಹುಟ್ಟಿಗೆ ಕರಾವಳಿಯ ಈ ಕಲೆ ಬಹಳಷ್ಟು ಕಾಣಿಕೆ ನೀಡಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಈ ಬಹುರೂಪಿ ಕಲೆಯನ್ನು  ಶಿವರಾಮ ಕಾರಂತರು ವಿದೇಶದಲ್ಲಿ ಪಸರಿಸಿದರು. ಈ ಕಲೆಯಲ್ಲಿ ತೆಂಕು ಮತ್ತು ಬಡಗು ತಿಟ್ಟುಗಳಿದ್ದರೂ ಆ ಎರಡರ  ಪರಿಣಾಮ ಮಾತ್ರ ಒಂದೇ ಆಗಿರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.