ADVERTISEMENT

ಸುರಕ್ಷತಾ ತಪಾಸಣೆ ಆರಂಭ

ನಮ್ಮ ಮೆಟ್ರೊ: ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:34 IST
Last Updated 24 ಮೇ 2017, 19:34 IST
ಸುರಕ್ಷತಾ ತಪಾಸಣೆ ಆರಂಭ
ಸುರಕ್ಷತಾ ತಪಾಸಣೆ ಆರಂಭ   
ಬೆಂಗಳೂರು: ನಮ್ಮ ಮೆಟ್ರೊ ಉತ್ತರ–ದಕ್ಷಿಣ ಕಾರಿಡಾರ್‌ನ ಯಲಚೇನಹಳ್ಳಿ–ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆ ಬುಧವಾರ ಆರಂಭವಾಯಿತು.
 
ಮೆಟ್ರೊ ರೈಲು ಸುರಕ್ಷತಾ ಆಯುಕ್ತ ಕೆ.ಎ.ಮನೋಹರನ್‌ ಹಾಗೂ ಮೆಟ್ರೊ ರೈಲು ಸುರಕ್ಷತಾ ಉಪ ಆಯುಕ್ತ ಇ.ಶ್ರೀನಿವಾಸ್‌ ಅವರು ಯೆಲಚೇನಹಳ್ಳಿ ನಿಲ್ದಾಣದಲ್ಲಿ ತಪಾಸಣೆ ಆರಂಭಿಸಿದರು.
 
ಮಧ್ಯಾಹ್ನ 3.30ಕ್ಕೆ ಆರಂಭವಾದ ತಪಾಸಣಾ ಕಾರ್ಯ ಸಂಜೆ 6.40ರವರೆಗೂ ಮುಂದುವರಿಯಿತು. ಆಯುಕ್ತರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನಿರ್ದೇಶಕ (ಯೋಜನೆ)   ವಿಜಯ ಕುಮಾರ್‌ ಧಿರ್‌,    ನಿರ್ದೇಶಕ (ರೋಲಿಂಗ್‌ ಸ್ಟಾಕ್‌, ಎಲೆಕ್ಟ್ರಿಕಲ್‌ ಸಿಗ್ನಲಿಂಗ್‌ ಮತ್ತು ಟೆಲಿಕಮ್ಯುನಿಕೇಷನ್ಸ್‌)  ಎನ್‌.ಎಂ.ಧೋಕೆ  ವಿವರಣೆ ನೀಡಿದರು. 
 
ಮೇ 29, 30 ಹಾಗೂ 31 ರಂದು ಇನ್ನೊಂದು ಸುತ್ತಿನ ಸುರಕ್ಷತಾ ತಪಾಸಣೆ ನಡೆಯಲಿದೆ. ಸುರಂಗ ಮಾರ್ಗದ ತಪಾಸಣೆಯೂ ಇದರಲ್ಲಿ ಸೇರಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌  ತಿಳಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.