ಬೆಂಗಳೂರು: ನಗರದ ಹಲವೆಡೆ ಶನಿವಾರ ಸಾಧಾರಣ ಮಳೆಯಾಗಿದೆ.
ಬೆಳ್ಳಂದೂರಿನಲ್ಲಿ ಗರಿಷ್ಠ 45 ಮಿ.ಮೀ. ಮಳೆಯಾಗಿದೆ. ಬಸವನಗುಡಿ, ಲಾಲ್ಬಾಗ್, ಜಯನಗರ, ಬನಶಂಕರಿ ಸುತ್ತಮುತ್ತಲೂ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದೆ.
2 ಮರ ಧರೆಗೆ: ಚಿಕ್ಕ ಬಾಣಸವಾಡಿಯ ಮುಖ್ಯರಸ್ತೆ ಹಾಗೂ ಓಕಳೀಪುರದಲ್ಲಿ ಎರಡು ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದವು.
ಬಿಟಿಎಂ ಲೇಔಟ್ನ 1ನೇ ಹಂತದ ಮುಖ್ಯರಸ್ತೆಯ ಮೇಲೆ ಮರದ ಕೊಂಬೆಯಿಂದ ಮುರಿದು ಬಿದ್ದಿತ್ತು. ಆ ಮಾರ್ಗಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿಯು ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.