ADVERTISEMENT

ಹಾವೇರಿ: ಮದುವೆಯಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 20:40 IST
Last Updated 26 ಜನವರಿ 2015, 20:40 IST
ಮದುವೆಯಲ್ಲಿ ಧ್ವಜಾರೋಹಣ ನೆರವೇರಿಸಿದ ವಧು ಪ್ರಿಯಾಂಕಾ, ವರ ಆದರ್ಶ
ಮದುವೆಯಲ್ಲಿ ಧ್ವಜಾರೋಹಣ ನೆರವೇರಿಸಿದ ವಧು ಪ್ರಿಯಾಂಕಾ, ವರ ಆದರ್ಶ   

ಹಾವೇರಿ: ಗಣರಾಜ್ಯೋತ್ಸವದ ದಿನವಾದ ಸೋಮವಾರ ರಾಷ್ಟ್ರಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿದ ವಧು–ವರರು ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮಕ್ಕೆ ನಗರದ ಶಿವಬಸವ ಕಲ್ಯಾಣಮಂಟಪ ಸಾಕ್ಷಿಯಾಯಿತು.

ಸವಣೂರ ತಾಲ್ಲೂಕು ಕಳಸೂರ ಗ್ರಾಮದ ಶ್ರೀಕಾಂತಪ್ಪ ಬನ್ನಿಕೊಪ್ಪ ಅವರ ಮಗಳು ಪ್ರಿಯಾಂಕಾ ಮತ್ತು ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದ ಆದರ್ಶ ಹಸಮಣೆ ಏರಿದ ಜೋಡಿ. ಸಂಪ್ರದಾಯದಂತೆ ವಿಧಿ- ವಿಧಾನ ಪೂರೈಸಿದ ಬಳಿಕ ವಧು–ವರರು ಕಲ್ಯಾಣ ಮಂಟಪದ ಎದುರಿಗೆ ಧ್ವಜಾರೋಹಣ ನೆರವೇರಿಸಿದರು.

ನಂತರ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು. ಬಳಿಕ ಮದುವೆ ವಿಧಿ–ವಿಧಾನಗಳು ಮುಂದುವರಿಸಿ, ದಾಂಪತ್ಯಕ್ಕೆ ಕಾಲಿಟ್ಟರು. ಅಷ್ಟು ಮಾತ್ರವಲ್ಲ, ಮದುವೆಗೆ ಬಂದ ಅತಿಥಿಗಳಿಗೆ ಗುಲಾಬಿ ಗಿಡಗಳನ್ನು ನೀಡುವ ಮೂಲಕ ಪರಿಸರ ಜಾಗೃತಿಯನ್ನೂ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.