ADVERTISEMENT

ಹೈಕೋರ್ಟ್‌ ಆದೇಶ ನಿರೀಕ್ಷಿತ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 20:07 IST
Last Updated 24 ಏಪ್ರಿಲ್ 2015, 20:07 IST

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ನಿರೀಕ್ಷಿತ. ಆದರೆ ಪಾಲಿಕೆಯನ್ನು ಒಡೆಯಬಾರದು ಎಂಬ ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ‘ಸೋಮವಾರ ನಡೆ ಯುವ ವಿಧಾನ ಮಂಡಲ ಅಧಿವೇಶನದ ವೇಳೆ, ಪಾಲಿಕೆ ವಿಭಜಿಸುವ ತಿದ್ದುಪಡಿ ಮಸೂದೆಯನ್ನು ಪರಿಶೀಲನಾ ಸಮಿತಿಗೆ (ಸೆಲೆಕ್ಟ್‌ ಕಮಿಟಿ) ಒಪ್ಪಿಸಬೇಕು ಎಂದು ಪರಿಷತ್ತಿನಲ್ಲಿ ಪ್ರಸ್ತಾವ ಮಂಡಿಸಲಿದ್ದೇವೆ’ ಎಂದು ಸ್ಪಷ್ಟ‍ಪಡಿಸಿದರು.

‘ಪಾಲಿಕೆ ವಿಭಜನೆ ವಿಚಾರದಲ್ಲಿ ಬಿಜೆಪಿ ನಿಲುವು ಕೂಡ ಬದಲಾಗದು ಎಂಬ ವಿಶ್ವಾಸ ಇದೆ. ಪಾಲಿಕೆ ವಿಭಜಿ ಸುವುದರಿಂದ ಆಡಳಿತದಲ್ಲಿ ಸುಧಾರಣೆ ತರಲಾಗದು. ಆದರೆ, ಅಧಿಕಾರಿಗಳು ಎಸಗಿದ ತಪ್ಪುಗಳನ್ನು ಸರಿಪಡಿಸಿದರೆ ಆಡಳಿತ ಸರಿಯಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.