ADVERTISEMENT

‘ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:30 IST
Last Updated 19 ಏಪ್ರಿಲ್ 2014, 19:30 IST

ಬೆಂಗಳೂರು:‘ಆಹಾರ ಉತ್ಪಾದನೆ ಹಾಗೂ ಭದ್ರತೆಯ ವಿಚಾರದಲ್ಲಿ ದೇಶ ಸ್ವಾವಲಂಬನೆ ಸಾಧಿಸುವುದು ಇಂದಿನ ಅಗತ್ಯ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅಭಿಪ್ರಾ ಯಪಟ್ಟರು. ಡಾ.ಪ್ರೇಮನಾಥ ಕೃಷಿ ವಿಜ್ಞಾನ ಪ್ರತಿಷ್ಠಾನವು ಹೊರತಂದಿರುವ ‘ಫುಡ್, ಅಗ್ರಿಕಲ್ಚರ್ ಅಂಡ್ ಹ್ಯೂಮಾನಿಟಿ’ ಸಂಪುಟವನ್ನು ನಗರದಲ್ಲಿ ಶನಿವಾರ ಬಿಡುಗಡೆ ಮಾಡಿ ಮಾತನಾಡಿದರು.

‘ವಿಶ್ವದಲ್ಲಿ  ಆರು ಮಂದಿಯಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲು ತ್ತಿದ್ದು, ಅದರಲ್ಲಿ ಆರನೇ ವ್ಯಕ್ತಿ ಭಾರತೀಯ. ಇದು ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶವು ಪ್ರಸ್ತುತ ಆಹಾರ ಉತ್ಪಾದ ನೆಯಲ್ಲಿ ನಿಗದಿತ ಗುರಿಯನ್ನು ತಲು ಪಿದ್ದು, ಅದರ ಸುಸ್ಥಿರತೆಯನ್ನು ಕಾಪಾ ಡುವುದು ಕೂಡ ಅಗತ್ಯ. ಅಲ್ಲದೇ, ಜನ ಸಂಖ್ಯೆ ಹೆಚ್ಚಿದಂತೆ ಆಹಾರದ ಬೇಡಿ ಕೆಯು ಹೆಚ್ಚುವುದರಿಂದ ಹೊಸ ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಉತ್ಪಾದನೆ ಗಳಿಸಲು ಸಾಧ್ಯವಾಗಬೇಕು’ ಎಂದರು.

‘ಯುವಜನರನ್ನು ಕೃಷಿ ಕ್ಷೇತ್ರದೆಡೆಗೆ ಆಕರ್ಷಿಸುವ ಕೆಲಸ ನಡೆಯಬೇಕು. ರಾಜ್ಯದಲ್ಲಿ ಕೃಷಿ ವಿಜ್ಞಾನಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು. ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ, ‘ಸುಸ್ಥಿರ ಕೃಷಿಗೆ ಅಗತ್ಯ ವಿರುವ ನೀರು ಹಾಗೂ ಮಣ್ಣಿನ ನಿರ್ವಹಣೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

‘ಬೇಡಿಕೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.