ADVERTISEMENT

‘ಆಹಾರ ಪದಾರ್ಥಗಳಲ್ಲಿ ವಿಷ’

ಅಂತರರಾಷ್ಟ್ರೀಯ ಮಟ್ಟದ ವಿಷಶಾಸ್ತ್ರ ಕಾರ್ಯಾಗಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:30 IST
Last Updated 8 ಫೆಬ್ರುವರಿ 2016, 19:30 IST
‘ಅಂತರರಾಷ್ಟ್ರೀಯ ಮಟ್ಟದ ವಿಷಶಾಸ್ತ್ರ ಕಾರ್ಯಾಗಾರ’ದಲ್ಲಿ ಡಾ. ಎಸ್. ಯತಿರಾಜ್, ಡಾ. ಸಿ. ರೇಣುಕಪ್ರಸಾದ್, ಅಮೆರಿಕದ ವಿಷಶಾಸ್ತ್ರಜ್ಞ ಡಾ. ಶೈನೆ ಗಾಡ್, ಡಾ. ಎಚ್.ಎಂ. ಜಯಪ್ರಕಾಶ, ವಿಷಶಾಸ್ತ್ರಜ್ಞೆ ಡಾ.ಸಮಂತಾ ಗಾಡ್ ಪಾಲ್ಗೊಂಡಿದ್ದರು  –ಪ್ರಜಾವಾಣಿ ಚಿತ್ರ
‘ಅಂತರರಾಷ್ಟ್ರೀಯ ಮಟ್ಟದ ವಿಷಶಾಸ್ತ್ರ ಕಾರ್ಯಾಗಾರ’ದಲ್ಲಿ ಡಾ. ಎಸ್. ಯತಿರಾಜ್, ಡಾ. ಸಿ. ರೇಣುಕಪ್ರಸಾದ್, ಅಮೆರಿಕದ ವಿಷಶಾಸ್ತ್ರಜ್ಞ ಡಾ. ಶೈನೆ ಗಾಡ್, ಡಾ. ಎಚ್.ಎಂ. ಜಯಪ್ರಕಾಶ, ವಿಷಶಾಸ್ತ್ರಜ್ಞೆ ಡಾ.ಸಮಂತಾ ಗಾಡ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಔಷಧ ಮತ್ತು ವಿಷಶಾಸ್ತ್ರ ವಿಭಾಗ ಹಾಗೂ ಅಸೋಸಿಯೇಷನ್ ಆಫ್‌ ಟಾಕ್ಸಿಕಾಲಜಿ ವತಿಯಿಂದ ನಗರದಲ್ಲಿ ಸೋಮವಾರದಿಂದ ಫೆ.10ರವರೆಗೆ ನಡೆಯುವ ‘ಅಂತರರಾಷ್ಟ್ರೀಯ ಮಟ್ಟದ ವಿಷಶಾಸ್ತ್ರ ಕಾರ್ಯಾಗಾರ’ಕ್ಕೆ ಚಾಲನೆ ದೊರೆಯಿತು.

ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ  ಕುಲಪತಿ ಡಾ. ಸಿ.ರೇಣುಕಪ್ರಸಾದ್ ಮಾತ

ನಾಡಿ, ‘ದೈನಂದಿನ ಬಳಕೆಯ ಅಹಾರ ಪದಾರ್ಥಗಳಲ್ಲಿ ಇರುವ ವಿಷಕಾರಕ ಅಂಶಗಳು ಮಾನವ ಆರೋಗ್ಯಕ್ಕೆ ಮಾರಕವಾಗಿವೆ. ಈ ಬಗ್ಗೆ ಕಾರ್ಯಾಗಾರ
ದಲ್ಲಿ ಚರ್ಚೆ ನಡೆಯಬೇಕು’ ಎಂದರು.

ಪಶು ವೈದ್ಯಕೀಯ ವಿದ್ಯಾಲಯದ ಕುಲಸಚಿವ ಡಾ.ಎಚ್.ಎಂ.ಜಯಪ್ರಕಾಶ ಮಾತನಾಡಿ, ‘ಹೈನು ಉತ್ಪನ್ನಗಳಲ್ಲಿ ವಿವಿಧ ವಿಷಕಾರಕಗಳ ಅಂಶಗಳಿದ್ದು, ಇವು ಮಾನವ ಆರೋಗ್ಯಕ್ಕೆ ಮಾರಕವಾಗಿವೆ’ ಎಂದು ಹೇಳಿದರು.

ಪಶು ವೈದ್ಯಕೀಯ  ವಿದ್ಯಾಲಯದ ಡೀನ್‌ ಡಾ.ಎಸ್.ಯತಿರಾಜ್ ಮಾತನಾಡಿ, ‘ಪ್ರಾಣಿಜನ್ಯ ವಸ್ತುಗಳು ಮತ್ತು ಶೇಖರಿಸಿಡುವ ಅಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶಗಳು ಇರುವ ಸಾಧ್ಯತೆ ಇದೆ. ಯಾವ ಪದಾರ್ಥದಲ್ಲಿ ಎಷ್ಟು ವಿಷವಿದೆ ಎಂಬುದನ್ನು ಪತ್ತೆಹಚ್ಚಿ ಅದರ ವಿಶ್ಲೇಷಣೆ ಮಾಡಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT