ADVERTISEMENT

‘ಉತ್ಪನ್ನ ಗುಣಮಟ್ಟ ವೃದ್ಧಿಸಿ’

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 20:12 IST
Last Updated 27 ಏಪ್ರಿಲ್ 2015, 20:12 IST
ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ನಡೆದ ‘ಕ್ಯೂಎಂಎಸ್‌ ಐಎಸ್‌ಒ ಲೀಡ್‌ ಆಡಿಟರ್‌’ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ,  ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರಾದ ಡಾ.ಕ್ವೋಕ್‌ ಕಾಯಿ ನ್‌, ಮಹಮದ್‌ ಅಲಿ ಕಬೀರ್‌, ಫಾರೂಕ್‌ ಬದಾಮಿ, ರೋಹಿತ್‌ ಪೂಂಜ, ಪ್ರಾಂಶುಪಾಲ ಡಾ.ಎಚ್‌.ಸಿ.ನಾಗರಾಜ್‌ ಭಾಗವಹಿಸಿದ್ದರು.

ಬೆಂಗಳೂರು: ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸಂಬಂಧಿತ ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ವೃದ್ಧಿಸುವುದೊಂದೇ ಭಾರತ ಪ್ರಗತಿ ಸಾಧಿಸಲು ಇರುವ ಏಕೈಕ ಮಾರ್ಗ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಅಭಿಪ್ರಾಯಪಟ್ಟರು.

ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ನಿರ್ವಹಣೆ ಅದ್ಯಯನ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಕ್ಯೂಎಂಎಸ್‌ ಐಎಸ್‌ಒ ಲೀಡ್‌ ಆಡಿಟರ್‌’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಅವರ ಆಶಯದಂತೆ ಮೇಕ್‌ ಇನ್‌ ಇಂಡಿಯಾದ ಕನಸು ನನಸಾಗಬೇಕಾದರೆ ಶ್ರೇಷ್ಠ ಗುಣಮಟ್ಟ ಕಾಯ್ದುಕೊಳ್ಳುವುದು ಅನಿವಾರ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT