ADVERTISEMENT

‘ಬದಲಾವಣೆಗೆ ಬದ್ಧತೆಯೇ ಮುಖ್ಯ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:41 IST
Last Updated 20 ನವೆಂಬರ್ 2014, 19:41 IST

ಬೆಂಗಳೂರು: ‘ಬದ್ಧತೆ ಇರುವ ಕೆಲವೇ ಕೆಲವು ವ್ಯಕ್ತಿ ಗಳಿಂದ ನಿಜಕ್ಕೂ ದೇಶದ ಬದಲಾವಣೆ ಸಾಧ್ಯವಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್ ಆಶಾವಾದ ವ್ಯಕ್ತ ಪಡಿಸಿದರು.

ಗುರುವಾರ ಹೈಕೋರ್ಟ್‌ನಲ್ಲಿ, ಲಹರಿ ಅಡ್ವೊಕೇಟ್ಸ್ ಫೋರಮ್ ಆಯೋಜಿಸಿದ್ದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು, ‘ಆಡಳಿತ ದಲ್ಲಿ ಪಾರದರ್ಶಕತೆಯ ರಕ್ಷಣೆ ಮಾಡುವಲ್ಲಿ ನ್ಯಾಯಾಂಗದ ಪಾತ್ರ’ ವಿಷಯವಾಗಿ  ಮಾತನಾಡಿದರು.

‘ಸ್ವಾತಂತ್ರ್ಯಾ ನಂತರ ದೇಶದ ಪ್ರಗತಿ ಮತ್ತು ಬದಲಾವಣೆಗಳಿಗೆ ನ್ಯಾಯಾಂಗ ದ ಕೊಡುಗೆ ಅಪಾರ ವಾಗಿದೆ. ಕೇಂದ್ರೀಯ ಸ್ಪರ್ಧಾ ಆಯೋಗ, ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ), ಮಾಹಿತಿ  ಹಕ್ಕು ಕಾಯ್ದೆ (ಆರ್‌ಟಿಐ), ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಅರಣ್ಯ ಸಂರಕ್ಷಣೆ, ಅನ್ಯಾಯದ ವಿರುದ್ಧ ದನಿ ಎತ್ತುವವರ ರಕ್ಷಣೆಗಾಗಿಯೇ ಇರುವ ಕಾಯ್ದೆ (ವಿಶಲ್‌ ಬ್ಲೋವರ್ಸ್ ಆ್ಯಕ್ಟ್–2013), ಮೀಸಲಾತಿ ಸೇರಿದಂತೆ ಕಾಲಕಾಲಕ್ಕೆ ಹತ್ತಾರು ಕಾಯ್ದೆಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತುಷ್ಟು ಬಲ ಗೊಳಿಸಿವೆ’ ಎಂದು ಅವರು ವಿವರಿಸಿದರು.

‘ದೇಶದ ಬದಲಾವಣೆಗೆ ಚುನಾ ವಣಾ ಸುಧಾರಣೆಯೇ ಮುಖ್ಯ’ ಎಂದು ಹೇಳಿದ ಅವರು, ‘ಈ ದಿಸೆಯಲ್ಲಿ ನ್ಯಾಯಾಂಗ, ಮಾಧ್ಯಮ ಮತ್ತು ಸಾರ್ವಜನಿಕರ  ಅಭಿಪ್ರಾಯಗಳು ಬಹುಮುಖ್ಯ ಪಾತ್ರ ವಹಿಸಿವೆ’ ಎಂದರು.
ಹಿರಿಯ ವಕೀಲ ಬಿ.ವಿ.ಆಚಾರ್ಯ ಮಾತನಾಡಿದರು.

ಫೋರಮ್‌ ಅಧ್ಯಕ್ಷ ವಿ.ಎನ್. ಮೂರ್ತಿ ಕಾರ್ಯದರ್ಶಿ ಎಸ್. ಗೋಪಾಲ್ ಹಾಗೂ ಇತರ ಗಣ್ಯರು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.