ADVERTISEMENT

‘ಮೋದಿ ಸಂಪುಟ ಸ್ವಚ್ಛ ಮಾಡಲಿ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ಬೆಂಗಳೂರು: ‘ಭಾರತವನ್ನು ಸ್ವಚ್ಛ ಗೊಳಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟವನ್ನು ಸ್ವಚ್ಛಗೊಳಿಸಲಿ...’
ಹೀಗೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಮುಖಂಡ ಕೆ.ಎನ್‌. ಗೋವಿಂದಾಚಾರ್ಯ.

ಭಾರತ ಯಾತ್ರಾ ಕೇಂದ್ರ ಸೋಮವಾರ ಪ್ರೆಸ್‌ಕ್ಲಬ್‌ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರ ರಾಜಕಾರಣ ಕುರಿತ ಸಂವಾದದಲ್ಲಿ ಅವರು ಮಾತ ನಾಡಿದರು.

‘ಮೋದಿ ತಮ್ಮ ಸಂಪುಟದಲ್ಲಿರುವ ಭ್ರಷ್ಟರನ್ನು ಹೊರಗಿಡುವ ಮೂಲಕ ಸಂಪುಟದ ಸ್ವಚ್ಛತೆಗೆ ಪ್ರಯತ್ನಿಸಲಿ. ಸುಷ್ಮಾ ಸ್ವರಾಜ್‌,  ವಸುಂಧರಾ ರಾಜೇ ಸೇರಿ ದಂತೆ ಅನೇಕರು ಹಗರಣಗಳಲ್ಲಿ ಭಾಗಿ ಯಾಗಿದ್ದಾರೆ ಎಂಬ ಆರೋಪಗಳಿವೆ. ಚುನಾವಣೆ ಸಂದರ್ಭದಲ್ಲಿ  ಭ್ರಷ್ಟಾಚಾರ ಮುಕ್ತ  ಆಡಳಿತದ ಆಶ್ವಾಸನೆ ನೀಡಿ ದವರು ಹಾಗೆ ನಡೆದುಕೊಳ್ಳಬೇಕಾಗಿರುವುದು ಧರ್ಮ’ ಎಂದರು.

ಇತ್ತೀಚೆಗೆ ಚೀನಾ ಪ್ರವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ  ಅವರು ಹೇಳಿದ್ದ, ‘ಇಷ್ಟು ವರ್ಷ ಭಾರತೀಯರಾಗಿ ಜನಿಸಿದ್ದಕ್ಕೆ ನಾಚಿಕೆಯಾಗುತ್ತಿತ್ತು. ಈಗ ದೇಶವನ್ನು  ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಎನಿ ಸುತ್ತಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಭಾರತದ ಘನತೆ ಯಾರು ಅಧಿಕಾರಕ್ಕೆ ಬಂದರು, ಯಾರು ಹೋದರು ಎಂಬುದರಿಂದ ನಿರ್ಧಾರವಾಗುವುದಿಲ್ಲ’ ಎಂದರು.

‘ಇನ್ನು ನಾಲ್ಕು ವರ್ಷದ ನಂತರ ಮೋದಿ ಈ ಮಾತು ಹೇಳುವಂತೆ ನಡೆದುಕೊಳ್ಳಬೇಕು.  ಆದರೆ, ಅಧಿಕಾರ ಸಿಕ್ಕಿದ ಕೂಡಲೇ ಹೀಗೆ ಹೇಳಿರುವುದು ಶೋಭೆಯಲ್ಲ. ಭಾರತದ ಭವ್ಯತೆಯನ್ನು ಯಾರಿಂದಲೂ ಕಡಿಮೆ ಮಾಡಲು ಸಾಧ್ಯವಿಲ್ಲ. ಹೇಳಿಕೆ ನಡವಳಿಕೆಯಲ್ಲಿಇರಬೇಕು’ ಎಂದರು.

‘ಜನರನ್ನು ನಂಬಿಸಿ ಈಗ ಮೋಸ ಮಾಡುತ್ತಿದ್ದೀರಿ. ಆದರೆ, ಸಮಾಜ ನೈತಿಕತೆಯ ಮೇಲೆ ನಿಂತಿದೆ. ಕಾನೂನಿನ ಮೇಲೆ ಅಲ್ಲ ಎಂಬುದನ್ನು ಮರೆಯ ಬೇಡಿ. ಜನ ಮೊದಲೇ ಕಷ್ಟದಲ್ಲಿದ್ದಾರೆ. ಅವರ ನಂಬಿಕೆಗೆ ದ್ರೋಹ ಮಾಡಬೇಡಿ’ ಎಂದು ಹೇಳಿದರು.

ಅಚ್ಚರಿ: ಕರ್ನಾಟಕದ ಲೋಕಾ ಯುಕ್ತ ಸಂಸ್ಥೆಯೇ ಭ್ರಷ್ಟಾಚಾರ ದಲ್ಲಿ ತೊಡಗಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದು ಅಚ್ಚರಿ ತಂದಿದೆ. ವಿರೋಧ ಪಕ್ಷಗಳು ಒತ್ತಡ ಹಾಕುವಲ್ಲಿ ಸೋತಿವೆ ಎಂದರು.

ಬೆಂಬಲಿಸಬೇಕಾಗಿದೆ: ಸರ್ಕಾರಗಳು ರೈತರ ಬೆಳೆಗೆ ಸರಿಯಾದ ದರ ನಿಗದಿ ಪಡಿಸುವ ಮೂಲಕ ಅವರನ್ನು ಬೆಂಬಲಿಸಬೇಕಾಗಿದೆ. ಆದರೆ, ಪಂಚ ವಾರ್ಷಿಕ ಯೋಜ ನೆಯ ಕಾಲದಿಂದಲೇ ರೈತರನ್ನು ಕಡೆಗಣಿಸಲಾಗಿದೆ. ವಿಶ್ವ ಬ್ಯಾಂಕ್‌ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ 40 ಕೋಟಿ ರೈತರು ಕೃಷಿಯಿಂದ ಹಿಂದೆ ಸರಿದಿದ್ದಾರೆ.  ರೈತರು ಕೃಷಿ ಬಿಟ್ಟು ಉದ್ದಿಮೆಗಳಲ್ಲಿ ಕಾರ್ಮಿಕರಾಗಿ ತೊಡಗಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ನೀತಿ ಆಯೋಗ ಹೇಳಿದೆ. ಇದು ವಿಷಾದಕರ ಎಂದರು.

ಭೂಸ್ವಾಧೀನ ಮಸೂದೆ ತಿದ್ದುಪಡಿಗೆ ಅಷ್ಟೊಂದು ತರಾತುರಿಯ ಅಗತ್ಯವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.