ADVERTISEMENT

‘ಶಾಸ್ತ್ರೀಯ ಸಂಗೀತದ ಪರಿಚಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST
ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ನೃತ್ಯ ವಿದ್ಯಾಥಿಗಳ ದೃಶ್ಯ ಚಿತ್ರಣದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು
ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ನೃತ್ಯ ವಿದ್ಯಾಥಿಗಳ ದೃಶ್ಯ ಚಿತ್ರಣದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು   

ಬೆಂಗಳೂರು: ‘ನಮ್ಮ ಭಾಷೆ ಹಾಗೂ ಪರಂಪರೆಗೆ ಅತ್ಯಂತ ಮಹತ್ವವಿದೆ. ನಾಡಿನ ಶಾಸ್ತ್ರೀಯ ನೃತ್ಯಕ್ಕೆ ವಿಶೇಷ ಗೌರವ ಇರುವುದರಿಂದ ಅದನ್ನು ಜಾಗತಿಕ ನೆಲೆಗಟ್ಟಿಗೆ ಪರಿಚಯಿಸಬೇಕು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಸಲಹೆ ನೀಡಿದರು.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ‘ದೃಶ್ಯ ಚಿತ್ರಣದಲ್ಲಿ ಕುವೆಂಪು’ ನೃತ್ಯ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
‘ಈ ನಾಡಿನಲ್ಲಿ ನೃತ್ಯ, ಸಂಗೀತ,  ಸಾಹಿತ್ಯ ಇರದೇ ಹೋಗಿದ್ದರೆ, ಜನರು ಹುಚ್ಚರಾಗುತ್ತಿದ್ದರು. ಹಾಗಾಗಿ­ಯೇ ಇವೆಲ್ಲ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ’ ಎಂದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥೆ ಪ್ರೊ. ಬಿ.ಎಂ.ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲ­ಯದ ಹಣಕಾಸು ಅಧಿಕಾರಿ ನಾಗರಾಜ ಶೇರಿಗಾರ್ ಅತಿಥಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.