ADVERTISEMENT

‘ಸಂಸ್ಕೃತ ಶಾಸ್ತ್ರಗ್ರಂಥಗಳು ಕನ್ನಡದಲ್ಲಿ ಬರಲಿ’

‘ಅರ್ಷಧಾರ–2013’ ವೇದ ವಿಜ್ಞಾನ ರಾಷ್ಟ್ರೀಯ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2013, 19:30 IST
Last Updated 28 ಡಿಸೆಂಬರ್ 2013, 19:30 IST

ಬೆಂಗಳೂರು: ‘ಸಂಸ್ಕೃತ ವಿದ್ವಾಂಸರು ಸಂಸ್ಕೃತ ಶಾಸ್ತ್ರ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವ ಮನಸ್ಸು ಮಾಡ ಬೇಕು’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟ ಸುಬ್ಬಯ್ಯ ಹೇಳಿದರು.

ಧರ್ಮ ಜಾಗೃತಿ ಟ್ರಸ್ಟ್‌ ನಗರದ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಅರ್ಷ­ಧಾರ–2013’ ವೇದ ವಿಜ್ಞಾನ ಕುರಿತು ರಾಷ್ಟ್ರೀಯ ಸಮಾವೇಶ’ ದಲ್ಲಿ  ಅವರು ಮಾತನಾಡಿದರು. ‘ಸಂಸ್ಕೃತ ವಿದ್ವಾಂಸರು ತಮ್ಮ ಜೀವಿತಾವಧಿಯಲ್ಲಿ ಒಂದು ಸಂಸ್ಕೃತ ಶಾಸ್ತ್ರ ಗ್ರಂಥವನ್ನು ಕನ್ನಡದಲ್ಲಿ ಬರೆದರೆ, ಸಂಸ್ಕೃತ ಮತ್ತು ಶಾಸ್ತ್ರ ಗ್ರಂಥ­ಗಳು ವಿಸ್ತಾರ ವಾಗಿ ಬೆಳೆಯುತ್ತವೆ’ ಎಂದು ಅಭಿಪ್ರಾಯಪಟ್ಟರು.
‘ಕನ್ನಡವೂ ಅಗಾಧವಾದ ಸ್ಥಾನವ ನ್ನು ಪಡೆದಿದೆ. ಸಂಸ್ಕೃತ ವಿದ್ವಾಂಸರನ್ನು ಕನ್ನಡದ ಲೇಖಕರು ಎಂದು ಗುರುತಿಸ ಲಾಗುತ್ತದೆ. ಒಟ್ಟಿ­ನಲ್ಲಿ ಸಂಸ್ಕೃತವು ಜನಸಾಮಾನ್ಯರಿಗೂ ಅರ್ಥವಾಗಿ, ಜನಸಾಮಾನ್ಯರ ಭಾಷೆಯೆಂದಾ ಗಬೇಕು’ ಎಂದರು.

ಯೋಗಗುರು ಬಾಬಾ ರಾಮ ದೇವ್‌ ಮಾತನಾಡಿ, ‘ಸಂಸ್ಕೃತ ಭಾಷೆಯು ದೈವಿಕ ಭಾಷೆಯಾಗಿದೆ. ಎಲ್ಲ ಭಾಷೆಗಳ ಮಾತೃ ಭಾಷೆ ಯಾಗಿದೆ. ಆದರೆ, ಈಗ ಸಂಸ್ಕೃತವನ್ನು ಮೃತ ಭಾಷೆಯೆಂದು ಕರೆದು ಅದನ್ನು ಕಡೆಗಣಿಸಲಾಗುತ್ತಿದೆ. ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳುವುದು ಪ್ರತಿ­ಯೊಬ್ಬರ ಕರ್ತವ್ಯವಾಗಿದೆ’ ಎಂದರು.

‘ದೇಶದಲ್ಲಿ ಸಂಸ್ಕೃತಕ್ಕೆ ಮೊದಲ ಸ್ಥಾನವನ್ನು ನೀಡಬೇಕು. ನಂತರ ರಾಷ್ಟ್ರಭಾಷೆಗೆ, ಭಾರತೀಯ ಭಾಷೆ ಗಳಿಗೆ ನೀಡಿದ ಸ್ಥಾನದ ನಂತರ ಇಂಗ್ಲಿಷ್‌ ಭಾಷೆಗೆ ಸ್ಥಾನವನ್ನು ನೀಡ ಬೇಕು. ಇಂಗ್ಲಿಷ್‌ ಭಾಷೆ ಬಗ್ಗೆ ಅನಾ ದರವಿಲ್ಲ. ಆದರೆ, ಆ ಭಾಷೆಗೆ ಇದು ವರೆಗೂ ನೀಡಿದ್ದ ಪ್ರಾಮುಖ್ಯತೆ­ಯನ್ನು ಇನ್ನು ಮುಂದೆ ನೀಡ ಬೇಕಾಗಿಲ್ಲ’ ಎಂದು ಹೇಳಿದರು.

‘ವಿಶ್ವದ ದೊಡ್ಡಣ್ಣ ಎನಿಸಿಕೊಂಡಿ ರುವ ಅಮೆರಿಕದ ಮೇಲೆ ₨ 1,000 ಲಕ್ಷ ಕೋಟಿ ಸಾಲವಿದೆ. ಭಾರತ, ಆರ್ಥಿಕತೆಯಲ್ಲಿ ಅಮೆರಿಕಕ್ಕಿಂತ ಹೆಚ್ಚು ಬಲಶಾಲಿಯಾಗಿದೆ. ಅಮೆರಿಕದ ಶೇ 80 ರಷ್ಟು ಪ್ರತಿಭೆ ಹೊರದೇಶ­ಗಳದ್ದಾಗಿದೆ. ಹಾಗಾದರೆ, ಅಮೆರಿಕವು ವಿಶ್ವದ ದೊಡ್ಡಣ್ಣ ಎಂದೆನಿಸಿಕೊಳ್ಳು­ವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ನಳಂದ, ತಕ್ಷಶಿಲಾ ವಿಶ್ವವಿದ್ಯಾಲ­ಯಗಳನ್ನು ನಾವೇ ಪುನರ್‌ ನಿರ್ಮಾಣ ಮಾಡಬೇಕು. ಮಾಧ್ಯಮಗಳಿಂದಲೂ ವೈದಿಕ ಜನರ ಅನಾದರವಾಗುತ್ತಿದೆ. ಇದು ತಪ್ಪಬೇಕು. ವೈದಿಕ ಕಾಲದಂತೆ ಈ ಕಾಲದಲ್ಲಿಯೂ ಸಂಸ್ಕೃತ ವಿದ್ವಾಂ­ಸರಿಗೆ ಗೌರವವನ್ನು ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.