ADVERTISEMENT

‘ಸರ್ವ ಧರ್ಮಗಳ ಆದರ್ಶ ಪಾಲಿಸಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 20:03 IST
Last Updated 28 ಜನವರಿ 2015, 20:03 IST

ಯಲಹಂಕ: ‘ಪ್ರಪಂಚದ ಎಲ್ಲ ಧರ್ಮಗಳು ಒಳ್ಳೆಯ­ದನ್ನೇ ಬಯ­ಸುತ್ತವೆ. ಹೀಗಾಗಿ ಎಲ್ಲ ಧರ್ಮಗಳ ಉತ್ತಮ ಅಂಶಗಳು ಹಾಗೂ ಆದರ್ಶ­ಗಳನ್ನು ಅಳ­ವಡಿಸಿ­ಕೊಂಡು ಧರ್ಮದ ಮಾರ್ಗದಲ್ಲಿ ನಡೆಯ­ಬೇಕು’ ಎಂದು ರಾಜ್ಯಪಾಲ ವಜುಭಾಯಿ  ವಾಲಾ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರಿನ­ಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾ­ಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಶಿವಶಕ್ತಿ ಭವನ ಹಾಗೂ ಜ್ಞಾನಾಮೃತ ಭವನ ಉದ್ಘಾಟಿಸಿ ಹಾಗೂ ದಿವ್ಯಪ್ರಕಾಶ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ವಿಶ್ವದಲ್ಲಿರುವ ಎಲ್ಲರೂ ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯಿಂದ ಬಾಳಬೇಕೆಂಬುದು ನಮ್ಮ ಸಂಸ್ಕೃತಿ ಹಾಗೂ ಧರ್ಮದ ತಿರುಳಾಗಿದ್ದು, ಅದರಂತೆ ನಾವು ನಡೆಯಬೇಕು. ಮಾನವನ ಜೀವನದಲ್ಲಿ ಶಾಂತಿಯನ್ನು ಪಡೆಯಬೇಕಾದರೆ ಮಾನಸಿಕವಾಗಿ ಸದೃಢರಾಗಬೇಕು. ಆತ್ಮ ಶುದ್ಧಿ­ಯಾದರೆ ಜೀವನ ಶುದ್ಧಿಯಾಗಲು ಸಾಧ್ಯ ಎಂದರು.

ಬ್ರಹ್ಮಕುಮಾರಿ ವಿವಿ (ಮೌಂಟ್‌ಅಬು) ಕಾರ್ಯ­ನಿರ್ವಾಹಕ ಕಾರ್ಯದರ್ಶಿ ಬಿ.ಕೆ.­ಮೃತ್ಯುಂಜಯ, ಮೈಸೂರು ಉಪವಲಯದ ನಿರ್ದೇಶಕಿ ಬಿ.ಕೆ.ಲಕ್ಷ್ಮಿ, ಬೆಂಗಳೂರು ನಗರ ಉಪವಲಯದ ನಿರ್ದೇಶಕಿ ಬಿ.ಕೆ.ಪದ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.