ADVERTISEMENT

1008 ಜಾಬ್ಸ್‌ ಡಾಟ್‌ ಕಾಮ್‌ಗೆ ಚಾಲನೆ

ತೃತೀಯ ಲಿಂಗಿಗಳಿಗೆ ಉದ್ಯೋಗದ ಮಾಹಿತಿ ಸೇವೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 20:18 IST
Last Updated 17 ಏಪ್ರಿಲ್ 2015, 20:18 IST

ಬೆಂಗಳೂರು: ನಗರದಲ್ಲಿ ಉದ್ಯೋಗ­ಕ್ಕಾಗಿ ಅಲೆದಾಡುವ ಉದ್ಯೋಗಕಾಂಕ್ಷಿ­ಗಳಿಗೆ ಉದ್ಯೋಗ ಲಭ್ಯತೆಯ ಮಾಹಿತಿ ನೀಡುವ ನಿಟ್ಟಿನಲ್ಲಿ ‍‘ವ್ಯಾಲ್ಯೂ ವಿಂಗ್ಸ್‌ ಪ್ರೈವೆಟ್‌ ಲಿಮಿಟೆಡ್‌’ ಕಂಪೆನಿ ‘1008 ಜಾಬ್ಸ್‌ ಡಾಟ್‌ ಕಾಮ್‌’  ಎಂಬ ವೆಬ್‌­­ಸೈಟ್‌ಗೆ ಶುಕ್ರವಾರ ಚಾಲನೆ ನೀಡಿತು.

ದೇಶದ ಮಾನವ ಸಂಪನ್ಮೂಲ ಸಂಸ್ಥೆ­ಗಳಲ್ಲಿ ಒಂದಾದ ‘ ವ್ಯಾಲ್ಯೂ ವಿಂಗ್ಸ್‌’ ಕಂಪೆನಿ, ಸಾಮಾನ್ಯ ಮಾಹಿತಿ ಜೊತೆಗೆ ತೃತೀಯ ಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೂ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗದ ಮಾಹಿತಿಯನ್ನು ಉಚಿತವಾಗಿ ನೀಡಲಿದೆ ಎಂದು     ಕಂಪೆನಿ ಸಿಇಒ ಕೃಷ್ಣ ಪ್ರಶಾಂತ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಲ್ಪಾವಧಿ, ದೀರ್ಘಾವಧಿ ಹಾಗೂ ದಿನ ನಿತ್ಯದ ಸಭೆ, ಸಮಾರಂಭಗಳಲ್ಲಿ ಲಭ್ಯ­ವಿರುವ ಕೆಲಸಗಳ ವಿವರವೂ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಹುದ್ದೆಗಳ ಖಾಲಿ ವಿವರ, ಸಂದರ್ಶನ, ಸ್ಥಳ, ಸಮಯ ಮತ್ತಿತರ ಮಾಹಿತಿಯನ್ನು ಉದ್ಯೋಗಾಕಾಂಕ್ಷಿಗಳಿಗೆ   ಒದಗಿಸಿ­ಕೊಡ­­ಲಾಗಿದೆ.

ಸಮಾಜದಿಂದ ನಿರ್ಲ­ಕ್ಷ್ಯ­ಕ್ಕೊಳಗಾದ ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರಿಗೂ  ಉದ್ಯೋಗ ಮಾಹಿತಿ ನೀಡಲಾಗುವುದು ಎಂದರು. ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆ ಸದಸ್ಯೆ ಅಕ್ಕೈ ಪದ್ಮಶಾಲಿ, ಕಂಪೆನಿ ನಿರ್ದೇಶಕರಾದ ರಂಜನಿ ಸುಣಗಾರ, ರಾಘವೇಂದ್ರ ಗೋಷ್ಠಿಯಲ್ಲಿದ್ದರು.

ಅರ್ಜಿ ಸಲ್ಲಿಕೆ ವಿಧಾನ
ವ್ಯಾಲ್ಯೂ ವಿಂಗ್ಸ್‌ ಕಂಪೆನಿಯ 1008 ಜಾಬ್ಸ್‌ ಡಾಟ್‌ ಕಾಮ್‌ (1008jobs.com) ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಿ­ಕೊಳ್ಳಬೇಕು.  ವೆಬ್‌ಸೈಟ್‌ನಲ್ಲಿ ವ್ಯಕ್ತಿಗತ ವಿವರವನ್ನು ದಾಖಲಿಸಿ, ಯೂಸರ್‌ ಐ.ಡಿ ಹಾಗೂ ಪಾಸ್‌ವರ್ಡ್‌ ಪಡೆದು ಲಾಗಿನ್‌ ಆಗಬೇಕು. ಉದ್ಯೋಗಾ­ಕಾಂ­ಕ್ಷಿಗಳ ವಿದ್ಯಾರ್ಹತೆ ಹಾಗೂ ಅನುಭವದ ಅನುಗುಣವಾಗಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಉದ್ಯೋಗ­ಗಳಿಗೆ ನೇರವಾಗಿ ಅರ್ಜಿ ಸಲ್ಲಿಸಿ ನಂತರ ಸಂಬಂಧಪಟ್ಟ ಕಂಪೆನಿಗಳು  ಉದ್ಯೋಗಾಕಾಂ­ಕ್ಷಿ­ಗಳನ್ನು ಸಂದರ್ಶನದಲ್ಲಿ ಪಾಲ್ಗೊಳ್ಳಲು ಸೂಚಿಸುತ್ತವೆ.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.