ADVERTISEMENT

ಅಂತರರಾಷ್ಟ್ರೀಯ ಸಮಾವೇಶ ಕೇಂದ್ರಕ್ಕೆ ಇಂದು ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ (ಬೆಂಗಳೂರು ಇಂಟರ್‍ನ್ಯಾಷನಲ್ ಕನ್ವೆನ್ಷನ್ ಸೆಂಟರ್) ಮತ್ತು ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್‌ ಪಾರ್ಕಿಗೆ (ಬಿಎಸ್‍ಬಿಪಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಫೆ. 22) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಭುವನಹಳ್ಳಿಯಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ‌ಸಮಾರಂಭದಲ್ಲಿ  ಸಚಿವರಾದ ಆರ್.ವಿ. ದೇಶಪಾಂಡೆ, ಕೃಷ್ಣ ಬೈರೇಗೌಡ, ಶಾಸಕ ಪಿಳ್ಳಮುನಿಶಾಮಪ್ಪ, ಸಂಸದ ವೀರಪ್ಪ ಮೊಯಿಲಿ, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಭಾಗವಹಿಸಲಿದ್ದಾರೆ.

‘ಉದ್ಯಮಕ್ಕೆ ಸಂಬಂಧಿಸಿದ ಸಭೆ, ಸಮಾರಂಭ ನಡೆಸುವ ಉದ್ದೇಶದಿಂದ ಸುಮಾರು ₹ 935 ಕೋಟಿ ವೆಚ್ಚದಲ್ಲಿ ಸಮಾವೇಶ ಕೇಂದ್ರ ಮತ್ತು ಸಿಗ್ನೇಚರ್ ಬ್ಯುಸಿನೆಸ್‌ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು ದೇಶಪಾಂಡೆ ತಿಳಿಸಿದರು.

ADVERTISEMENT

‘ಸಿಗ್ನೇಚರ್ ಬ್ಯುಸಿನೆಸ್‌ ಪಾರ್ಕ್‍ನಲ್ಲಿ 8,000 ಆಸನ ಸೌಲಭ್ಯವಿದೆ, ಸಮಾವೇಶ ಕೇಂದ್ರದಲ್ಲಿ 6,500 ಚದರ ಮೀಟರ್ ವಿಸ್ತೀರ್ಣದ ವಸ್ತುಪ್ರದರ್ಶನಾಲಯ, 1,000 ಜನ ಪಾಲ್ಗೊಳ್ಳಬಹುದಾದ ಸಭಾಂಗಣಗಳು, ಪಂಚತಾರಾ ಮತ್ತು ತ್ರಿತಾರಾ ಹೋಟೆಲುಗಳು, ಸರ್ವಿಸ್‌ ಅಪಾರ್ಟ್‍ಮೆಂಟ್‍ಗಳು ಇರಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.