ADVERTISEMENT

₹ 8 ಬಂಡವಾಳದಲ್ಲಿ ಆರಂಭವಾದ ಸಹಕಾರಿ ಬ್ಯಾಂಕಿಗೆ 100 ವರ್ಷ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:57 IST
Last Updated 23 ಏಪ್ರಿಲ್ 2017, 19:57 IST
ಪಿ.ಜಿ.ಆರ್.ಸಿಂಧ್ಯಾ (ಬಲತುದಿ) ಅವರು ಪಿ.ಎಸ್‌.ಚಂದ್ರಶೇಖರ್‌ ಅವರೊಂದಿಗೆ ಮಾತಕತೆ ನಡೆಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಸ್‌.ಸುರೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಪಿ.ಜಿ.ಆರ್.ಸಿಂಧ್ಯಾ (ಬಲತುದಿ) ಅವರು ಪಿ.ಎಸ್‌.ಚಂದ್ರಶೇಖರ್‌ ಅವರೊಂದಿಗೆ ಮಾತಕತೆ ನಡೆಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಸ್‌.ಸುರೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಇಲ್ಲಿ ಭಾನುವಾರ ನಡೆಯಿತು.

ಬ್ಯಾಂಕಿನ ಅಧ್ಯಕ್ಷ ಪಿ.ಎಸ್‌.ಚಂದ್ರಶೇಖರ್‌, ‘1916 ರಲ್ಲಿ 30 ಸದಸ್ಯರು 8 ರೂಪಾಯಿ 12 ಆಣೆ ಬಂಡವಾಳ ಹೂಡಿ ಬ್ಯಾಂಕ್‌ ಆರಂಭಿಸಿದರು. ಅಂದಿನಿಂದ ಸಂಸ್ಥೆ ಆರ್ಥಿಕವಾಗಿ ದುರ್ಬಲರಾಗಿರುವವರ ಹಿತ ಕಾಯುತ್ತ ಬಂದಿದೆ. ಹಾಗಾಗಿ ಇಂದು 17,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ₹ 230 ಕೋಟಿ ಠೇವಣಿ ಹೊಂದಿರುವ ಬ್ಯಾಂಕ್‌ ವಾರ್ಷಿಕವಾಗಿ ₹ 700 ಕೋಟಿ ವಹಿವಾಟು ನಡೆಸುತ್ತಿದೆ’ ಎಂದರು.

ಬ್ಯಾಂಕಿನ ರೂಪೇ ಕಾರ್ಡ್‌ ಬಿಡುಗಡೆ ಮಾಡಿದ ಅವರು, ‘ಠೇವಣಿದಾರರಿಗೆ ಅನುಕೂಲವಾಗಲು ಕೆಲವೇ ತಿಂಗಳಿನಲ್ಲಿ ಎಲ್ಲಾ ಎಟಿಎಂಗಳಲ್ಲೂ ಬಳಸಬಹುದಾದ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡುತ್ತೇವೆ’ ಎಂದರು.

ADVERTISEMENT

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯಾ, ‘ಭಾವಸಾರ ಸಮುದಾಯದವರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಸಮುದಾಯದ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.