ADVERTISEMENT

9ಕ್ಕೆ ‘ಜಾತಿ ಮುಕ್ತ ಮನಸ್ಸುಗಳ ಸಮ್ಮಿಲನ’ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಮೇ 2016, 20:00 IST
Last Updated 3 ಮೇ 2016, 20:00 IST
9ಕ್ಕೆ ‘ಜಾತಿ ಮುಕ್ತ ಮನಸ್ಸುಗಳ ಸಮ್ಮಿಲನ’ ಸಮ್ಮೇಳನ
9ಕ್ಕೆ ‘ಜಾತಿ ಮುಕ್ತ ಮನಸ್ಸುಗಳ ಸಮ್ಮಿಲನ’ ಸಮ್ಮೇಳನ   

ಬೆಂಗಳೂರು: ವಿಶ್ವ ಮಾನವ ವಿಚಾರ ವೇದಿಕೆಯು ವಿವಿಧ ಪ್ರಗತಿಪರ ಸಂಘಟನೆಗಳ  ಜತೆಗೂಡಿ ಇದೇ 9ರಂದು ಮಂಡ್ಯದ ರೈತ ಸಭಾಂಗಣದಲ್ಲಿ ‘ಜಾತಿ ಮುಕ್ತ ಮನಸ್ಸುಗಳ ಸಮ್ಮಿಲನ’ ಸಮ್ಮೇಳನವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ಮತ್ತು ಕುವೆಂಪು ಅವರ ಮಾನವೀಯ ಚಿಂತನೆಗಳು ಹಾಗೂ ವಿಚಾರಧಾರೆಗಳನ್ನು ಚರ್ಚಿಸುವ ಉದ್ದೇಶದಿಂದ ಈ ಸಮ್ಮೆಳನ ಆಯೋಜಿಸಲಾಗುತ್ತಿದೆ ಎಂದರು.

ಜಾತಿ ಮೀರಿದರೆಂಬ ಕಾರಣಕ್ಕೆ ಮಕ್ಕಳನ್ನೇ ಕೊಲ್ಲುವ ಮಟ್ಟಕ್ಕೆ ತಂದೆ ತಾಯಿಗಳ ಅಸಹನೆ ಬೆಳೆಯುತ್ತಿರುವುದು ಸರಿಯಲ್ಲ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಪ್ರಸ್ತುತ ಸಮಾಜದಲ್ಲಿ ಜಾತಿ–ಧರ್ಮಗಳ ಕಟ್ಟುಪಾಡುಗಳನ್ನು ಮೀರಿ ನಿಲ್ಲುವಂತ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಈ ಸಮ್ಮೇಳನವನ್ನು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ಉದ್ಘಾಟಿಸುವರು. ಸಾಹಿತಿ ದೇವನೂರ ಮಹಾದೇವ, ವಿಮರ್ಶಕ ಡಾ. ನಟರಾಜ್‌ ಹುಳಿಯಾರ್‌, ಚಿಂತಕರಾದ ಇಂದಿರಾ ಕೃಷ್ಣಪ್ಪ, ಪ್ರೊ. ಹಿ.ಶಿ.ರಾಮಚಂದ್ರೇಗೌಡ, ಡಾ.ಸಬಿಹಾ ಭೂಮಿಗೌಡ ಅವರು  ಸಮ್ಮೇಳನದಲ್ಲಿ ಭಾಗವಹಿಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.