ADVERTISEMENT

‘ವ್ಯವಸ್ಥೆ ಬದಲಾವಣೆಗೆ ನಾಗರಿಕರ ಸಹಭಾಗಿತ್ವ ಅಗತ್ಯ’‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:51 IST
Last Updated 3 ಜುಲೈ 2018, 19:51 IST

ಬೆಂಗಳೂರು: ‘ನಾಗರಿಕರು ಅಧಿಕಾರಿ ಮತ್ತು ರಾಜಕಾರಣಿಗಳಿಗೆಸಲಹೆ ಸೂಚನೆಗಳನ್ನು ನೀಡಿ, ಕೈಜೋಡಿಸಿದಾಗ ಮಾತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.

ನಗರದಲ್ಲಿ ಸಮತಾ ಲೇಡಿಸ್ ಕ್ಲಬ್ ಮತ್ತು ಅಖಿಲ ಭಾರತ ಗ್ರಾಹಕರ ರಕ್ಷಣಾ ವೇದಿಕೆ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಮೀಸಲಾತಿ ಯಶಸ್ವಿಯಾಗಿ ಜಾರಿಗೆ ಬಂದಿದೆಯೇ.? ಮಹಿಳೆಯರು ಮೀಸಲಾತಿ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಹುರಿದುಂಬಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು’ ಕುರಿತ ಚರ್ಚಾಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದ 224 ಕ್ಷೇತ್ರಗಳ‍ಪೈಕಿ ಕೇವಲ 8 ಜನ ಮಹಿಳೆಯರು ಇದ್ದೇವೆ. ಮಹಿಳಾ ಸಹ ಭಾಗಿತ್ವ ಕೇವಲ ಶೇ 50 ರಷ್ಟು ಮಾತ್ರ ಇದೆ. ಆದರೆ,ಸಮಸ್ಯೆಗಳು ಹೆಚ್ಚಾಗಿವೆ. ಹಾಗಾಗಿ ಮಹಿಳಾ ಮೀಸಲಾತಿ ಬಗ್ಗೆ ಜಾಗೃತಿ ವಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿಸಾಧ್ಯವಾದಷ್ಟು ಅಭಿವೃದ್ಧಿಗಾಗಿಯೇಶ್ರಮಿಸುವೆ. ನಿಮ್ಮ ದೂರು, ಸಮಸ್ಯೆಗಳಿಗೆ ದನಿಯಾಗಿ ದುಡಿಯುವೆ’ಎಂದೂಅವರು ಹೇಳಿದರು.

ADVERTISEMENT

ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರಾಜ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಣಕಾಸು ನಿಗಮದ ಉಪಮಹಾಪ್ರಬಂಧಕಿ ರೂಪಾ.ಆರ್‌, ‘ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರ ಸಹಭಾಗಿತ್ವ ಅಗತ್ಯ.ಮಹಿಳೆಯರಿಗೆ ಪೂರ್ಣ ಪ್ರಮಾಣದ ಮೀಸಲಾತಿ ಸಿಗುತ್ತಿಲ್ಲ. ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಇನ್ನೂ ಜಾರಿಯಾಗಿಲ್ಲ. ಮಹಿಳಾ ಸಂಕುಲದ ಅಭಿವೃದ್ಧಿ ಕುಂಠಿತವಾಗುತ್ತಿದೆ.ಈ ಬಗ್ಗೆ ಎಲ್ಲರೂ ಜಾಗೃತರಾಗಲೇಬೇಕು’ ಎಂದರು.

‘ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಹಾಗಾಗಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿಯೇಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.