ADVERTISEMENT

‘ಆರ್ಥಿಕ ಅಭಿವೃದ್ಧಿಗೆ ಆಡು ಸಾಕಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 7:15 IST
Last Updated 23 ಮಾರ್ಚ್ 2017, 7:15 IST

ಜನವಾಡ: ರೈತರು ಆರ್ಥಿಕ ಅಭಿವೃದ್ಧಿಗೆ ಕೃಷಿ ಜತೆಗೆ ಪಶು ಸಂಗೋಪನೆಯಂತಹ  ಉಪಕಸುಬು ಕೈಗೊಳ್ಳಬೇಕು ಎಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಬಿ.ವಿ.ಶಿವಪ್ರಕಾಶ ಹೇಳಿದರು.

ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಪಶು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸೋಮವಾರ ರೈತರಿಗೆ ವೈಜ್ಞಾನಿಕ ಆಡು ಸಾಕಾಣಿಕೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತ ನಾಡಿದರು.

ತಜ್ಞರ ಸಲಹೆ ಪಡೆದು ರೈತರು ಜಾನುವಾರುಗಳನ್ನು ಸಾಕಬೇಕು. ಯುವ ಕರು ಆಧುನಿಕ ತಂತ್ರಜ್ಞಾನ ಬಳಸಿ ಕೊಂಡು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ತರಬೇತಿಯಲ್ಲಿ 28 ರೈತರು ಆಡು ಸಾಕಣೆಯ ವಿವಿಧ ನೂತನ ವಿಧಾನಗಳ ಪರಿಚಯ ಮಾಡಿಕೊಡುವರು ಎಂದು ತಿಳಿಸಿದರು. ಆಡು ಸಾಕಾಣಿಕೆ ಕಡಿಮೆ ಬಂಡವಾಳದ ಉಪ ಕಸುಬಾಗಿದೆ. ಕಡಿಮೆ ಭೂಮಿ ಇರುವವರು ಹಾಗೂ ಭೂ ರಹಿತರು ಆಡು ಸಾಕಣೆ ಕೈಗೊಂಡು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ಪಶು ವೈದ್ಯಕೀಯ ಮಹಾ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಕುಮಾರ ರಾಠೋಡ್ ಹೇಳಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ. ಚನ್ನಪ್ಪಗೌಡ, ಡಾ.ಅನಂತರಾವ ದೇಸಾಯಿ ಇದ್ದರು. ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ರಿಲಯನ್ಸ್ ಪ್ರತಿಷ್ಠಾನ ಸಹಯೋಗದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.