ADVERTISEMENT

ಕೃಷಿ ಸೇವಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:29 IST
Last Updated 11 ನವೆಂಬರ್ 2017, 5:29 IST

ಭಾಲ್ಕಿ: ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಈಚೆಗೆ ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯ ಬೆಂಗಳೂರು, ಕೃಷಿ ಇಲಾಖೆ, ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಕೃಷಿ ಸೇವಾ ಕೇಂದ್ರ ಉದ್ಘಾಟಿಸಲಾಯಿತು.

ಭಾರತೀಯ ಸ್ಟೇಟ್ ಬ್ಯಾಂಕ್‌ನ ಆರ್ಥಿಕ ಸಾಕ್ಷರತಾ ಸಲಹೆಗಾರ ಸಿ.ಎಲ್.ರೆಡ್ಡಿ ಉದ್ಘಾಟಿಸಿ ಮಾತನಾಡಿ, ‘ಕೃಷಿ ಉತ್ಪಾದಕ ರೈತ ಸಂಘಗಳು ಆರ್ಥಿಕ ಅಭಿವೃದ್ಧಿಗೆ ತುಂಬಾ ಉಪಯುಕ್ತ. ಇತ್ತೀಚಿನ ದಿನಗಳಲ್ಲಿ ನಿರಂತರ ಬರಗಾಲ, ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕದೆ ರೈತರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೃಷಿ ಉತ್ಪಾದಕ ಸಂಸ್ಥೆಗಳು ಕೃಷಿ ಸೇವಾ ಕೇಂದ್ರ ಪ್ರಾರಂಭಿಸಿ, ತನ್ಮೂಲಕ ರೈತರಿಗೆ ಉತ್ತಮ ಫಸಲು ಬರುವಲ್ಲಿ ಮತ್ತು ಬೆಳೆಗಳಿಗೆ ಸಮರ್ಪಕ ಬೆಲೆ ಬರುವಂತೆ ನೋಡಿಕೊಳ್ಳುವಲ್ಲಿ ಸಹಕರಿಸುತ್ತವೆ’ ಎಂದು ಹೇಳಿದರು.

ADVERTISEMENT

ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ ಮಾತನಾಡಿ, ‘ಗಾಂಧೀಜಿ ಅವರ ಸ್ವರಾಜ್ಯ ಕಲ್ಪನೆ, ಗ್ರಾಮಗಳ ಅಭಿವೃದ್ಧಿ ರೈತರ ಆದಾಯ ಹೆಚ್ಚಳದಿಂದ ಮಾತ್ರ ಸಾಧ್ಯ’ ಎಂದರು.

ಕೃಷಿ ತಾಂತ್ರಿಕ ಅಧಿಕಾರಿ ಸತೀಶಕುಮಾರ ಮುದ್ದಾ, ರಾಜಕುಮಾರ ಹುಚ್ಚೆ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ರಘುನಾಥ, ಪ್ರಮುಖರಾದ ಶೇಷರಾವ ಕಣಜಿ, ಮಾಣಿಕಪ್ಪ ರುಮ್ಮಾ, ಮಾಣಿಕಪ್ಪ ಪಾವನಶೆಟ್ಟಿ, ಧರ್ಮಣ್ಣ ಪಾಟೀಲ, ವೈಜಿನಾಥ ತಾಂಬೂಲೆ, ರಾಮಶೆಟ್ಟಿ ನಾಗೂರೆ ಇದ್ದರು. ನಾಗಶೆಟ್ಟಿ ಮುಗನೂರ ಸ್ವಾಗತಿಸಿದರು. ರಾಜಕುಮಾರ ಸ್ವಾಮಿ ನಿರೂಪಿಸಿದರು. ಎಸ್.ಜಿ.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.