ADVERTISEMENT

ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿ:ಬಿಎಸ್‌ಪಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:30 IST
Last Updated 9 ನವೆಂಬರ್ 2017, 5:30 IST

ಬೀದರ್‌: ಸಾರ್ವತ್ರಿಕವಾಗಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ರಾಜ್ಯದಾದ್ಯಂತ ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಟಿಪ್ಪು, ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಗೆ ತಂದು ಬಡವರಿಗೆ ಭೂಮಿ ಒದಗಿಸಿದ್ದರು. ಮಲಬಾರ ಪ್ರದೇಶದಲ್ಲಿದ್ದ ಮಹಿಳೆಯರ ಅತೆಬೆತ್ತಲೆ ಸೇವೆ ಪದ್ಧತಿಯನ್ನು ನಿಷೇಧಿಸಿ ಹೆಣ್ಣುಮಕ್ಕಳ ಮಾನ ಕಾಪಾಡಿದ್ದರು. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಪಂಚಲಿಂಗ ಸ್ಥಾಪನೆ ಮಾಡಿದ ಮಹಾನ್‌ ಪುರುಷರಾಗಿದ್ದಾರೆ ಎಂದು ಹೇಳಿದರು.

ಬ್ರಿಟಿಷರನ್ನು ದೇಶದಿಂದ ಓಡಿ ಸಲು ಪಣ ತೊಟ್ಟಿದ್ದರು. ಬಿಜೆಪಿ, ಆರ್ಎಸ್‌ಎಸ್‌, ಬಜರಂಗ ದಳದವರು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪ ಡಿಸುತ್ತಿರುವುದು ಸರಿ ಅಲ್ಲ. ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿ ಸಬೇಕು. ಟಿಪ್ಪು ಜಯಂತಿ ಆಚರಿ ಸುವವರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ, ಕಾರ್ಯದರ್ಶಿ ಎಂ.ಡಿ.ಜಾಫರ್, ತಿಪ್ಪಣ್ಣ ವಾಲಿ, ಜಿಲ್ಲಾ ಸಂಯೋಜಕ ಸೈಯದ್, ಅಂಬಾದಾಸ್‌ ಚಕ್ರವರ್ತಿ , ಅಶೋಕ ಮಾಳಗೆ, ಶಿವರಾಜ ಲಾಡಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.