ADVERTISEMENT

ಡೆಂಗಿ ಮುಂಜಾಗ್ರತೆ ವಹಿಸದಿದ್ದರೆ ಅಪಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:16 IST
Last Updated 15 ಜುಲೈ 2017, 7:16 IST

ಹುಮನಾಬಾದ್: ಡೆಂಗಿ ಕುರಿತು ಮುಂಜಾಗ್ರತೆ ವಹಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿ ತೀರ್ಥಪ್ಪ  ಭೀಮಶೆಟ್ಟಿ ಅವರು ಹೇಳಿದರು.
ಸ್ಥಳೀಯ ಯಲಾಲ್‌ ಶಿಕ್ಷಣ ದತ್ತೀಯ ಬಸವೇಶ್ವರ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಡೆಂಗಿ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ನೀಡಿದರು.

ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಮನೆಯಲ್ಲಿ ಬಳಸುವುದಕ್ಕಾಗಿ ಸಂಗ್ರಹಿಸುವ ನೀರನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ಕಡ್ಡಾಯವಾಗಿ ಸ್ವಚ್ಛಗೊಳಿಸಿ, ಡ್ರಂ ಮತ್ತಿತರ ಪಾತ್ರೆಗಳನ್ನು ಬಿಸಿಲಿನಲ್ಲಿ ಸಂಪೂರ್ಣ ಒಣಗಿಸಿದ ನಂತರವೇ ಮತ್ತೆ ನೀರು ಸಂಗ್ರಹಿಸಿದಲ್ಲಿ (ಲಾರ್ವಾ)ಸೊಳ್ಳೆ ಪೂರ್ವದ ಹುಳು ಉತ್ಪತ್ತಿ ನಿಯಂತ್ರಿಸಲು ಸಾಧ್ಯ ಎಂದು ತೀರ್ಥಪ್ಪ ಭೀಮಶೆಟ್ಟಿ ಹೇಳಿದರು.

ಸಂಪನ್ಮೂಲ ವ್ಯಕ್ತಿ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಡೆಂಗಿ ವಿಶೇಷವಾಗಿ ಮಳೆಗಾಲದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು. ಉಪನ್ಯಾಸಕಿ ಸಂಗೀತಾ ಮಠಪತಿ ಮಾತನಾಡಿ, ಮನೆ ಮಕ್ಕಳ ಮೊದಲ ಪಾಠ ಶಾಲೆ ಎಂಬಂತೆ ಮಕ್ಕಳ ಪಾಲಿಗೆ ಪಾಲಕರು ಮನೆ ಮೊದಲ ಆಸ್ಪತ್ರೆಯಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ಶುಚಿತ್ವದ ಅರಿವು ಮೂಡಿಸಬೇಕು ಎಂದರು.

ADVERTISEMENT

ಸಭೆ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಮೀನಾಕ್ಷಿ ಯಡವೆ ಡೆಂಗಿ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ತನ್ನ ಜವಾಬ್ದಾರಿ ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತದೆ. ಅವರೊಂದಿಗೆ ಪಾಲಕರು, ಶಿಕ್ಷಕರು ಕೈಜೋಡಿಸಿದಲ್ಲಿ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಾಧ್ಯ ಎಂದರು.

ಸುರೇಶ ಬಪ್ಪಣ್ಣ, ಸಂಗೀತಾ ಧುತ್ತರಗಿ, ಹಣಮಂತ ಪದ್ಮನೋರ್‌, ಶೃತಿ ರೆಡ್ಡಿ ಹಾಜರಿದ್ದರು. ಪಲ್ಲವಿ ಆರ್‌.ಯಲಾಲ್‌ ಸ್ವಾಗತಿಸಿದರು.  ಮುಖ್ಯಶಿಕ್ಷಕ ತುಕಾರಾಮ ಬೈನೋರ್‌ ಪ್ರಾಸ್ತಾವಿಕ ಮಾತನಾಡಿದರು. ಗಣೇಶಸಿಂಗ್‌ ತಿವಾರಿ ನಿರೂಪಿಸಿದರು. ಶೋಭಾ ಠಾಕೂರ್‌ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.