ADVERTISEMENT

‘ನೀರಿನ ಸಮಸ್ಯೆ ಪರಿಹರಿಸಿ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:00 IST
Last Updated 21 ಏಪ್ರಿಲ್ 2017, 6:00 IST

ಬಸವಕಲ್ಯಾಣ:  ಪಟ್ಟಣ ಮತ್ತು ತಾಲ್ಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ನಗರಸಭೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಚುಳಕಿನಾಲಾ ಜಲಾಶಯದಿಂದ ನಿಯಮಿತವಾಗಿ ನೀರು ಸರಬರಾಜು ಮಾಡಬೇಕು. ಪಟ್ಟಣದಲ್ಲಿನ ಕೊಳವೆಬಾವಿಗಳಿಂದಲೂ ನೀರು ಒದಗಿಸಬೇಕು ಎಂದು ಸೂಚಿಸಿದರು.ನಗರಸಭೆ ಅಧ್ಯಕ್ಷ ಅಜರ್ ಅಲಿ ನವರಂಗ, ಪೌರಾಯುಕ್ತ, ಮಹ್ಮದ್ ಯುಸೂಫ್, ತಹಶೀಲ್ದಾರ್ ಕೀರ್ತಿ ಚಾಲಾಕ್ ಪಾಲ್ಗೊಂಡಿದ್ದರು.

ಉದ್ಘಾಟನೆ: ಸಭೆ ಬಳಿಕ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಿಂದ ಸಿಡಿಪಿಒ ಕಚೇರಿವರೆಗಿನ ಸಿಸಿ ರಸ್ತೆ, ಬಂಜಾರ ಕಾಲೊನಿಯಲ್ಲಿನ ರಸ್ತೆ, ಶರಣನಗರ ಕಾಲೊನಿ ರಸ್ತೆ, ಕಾಳಿಗಲ್ಲಿಯಲ್ಲಿ  ಎಚ್.ಕೆ.ಆರ್.ಡಿ. ಯೋಜನೆಯಲ್ಲಿ ನಿರ್ಮಿಸಲಾದ ಸಿಸಿ ರಸ್ತೆಗಳನ್ನು ಖೂಬಾ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT