ADVERTISEMENT

ಪಶು ವೈದ್ಯರ ಅನಿರ್ದಿಷ್ಟ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:45 IST
Last Updated 17 ಮೇ 2017, 5:45 IST

ಬೀದರ್: ಪಶು ವೈದ್ಯ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಪಶು ವೈದ್ಯರು ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಬಂದ್ ಮಾಡಿ ಮಂಗಳವಾರದಿಂದ ಜಿಲ್ಲಾಧಿ ಕಾರಿ ಕಚೇರಿ ಎದುರು ಅನಿರ್ದಿ ಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

‘ವೃಂದ ಮತ್ತು ನೇಮಕಾತಿ ನಿಯಮ ಗಳ ತಿದ್ದುಪಡಿ ಕರಡು ಅಧಿಸೂಚನೆಗೆ ಸಚಿವರು ಅನು ಮೋದನೆ ನೀಡಿದ್ದಾರೆ. ಆದರೂ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ’ ಎಂದು  ಆರೋಪಿಸಿದರು.

‘ಆದೇಶ ಹೊರಡಿಸದ ಕಾರಣ 5 ವರ್ಷಗಳಿಂದ ಸುಮಾರು 8 ರಿಂದ 10 ಸಾವಿರ ಸಿಬ್ಬಂದಿ ಪದೋನ್ನ ತಿಯಿಂದ ವಂಚಿತರಾಗಿದ್ದಾರೆ’ ಎಂದರು. ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಚಂದ್ರಶೇಖರ ಪಾಟೀಲ, ಡಾ.ಸುರೇಶ ದಿನಕರ, ಡಾ.ನೀಲಕಂಠ, ಡಾ. ಕುಮಾರ ಸ್ವಾಮಿ, ಡಾ.ಯೋಗೇ ಂದ್ರ, ಡಾ. ಮಹಿ ಪಾಲ್‌ಸಿಂಗ್ ಠಾಕೂರ್‌, ಡಾ. ಪೃಥ್ವಿ ರಾಜ, ಡಾ.ಕಿರಣ ಬಿರಾದಾರ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.