ADVERTISEMENT

‘ರೇಷ್ಮೆ ಬೆಳೆಗಾರರಿಗೆ ಶೇ 60ರಷ್ಟು ಸಹಾಯಧನ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:32 IST
Last Updated 6 ನವೆಂಬರ್ 2017, 5:32 IST
ಔರಾದ್ ತಾಲ್ಲೂಕಿನ ಭಂಡಾರಕುಮಟಾ ಗ್ರಾಮದ ರೇಷ್ಮೆ ಬೆಳೆಗಾರ ಜಾಕೀರ ಪಟೇಲ್ ಅವರ ಹೊಲಕ್ಕೆ ಭಾನುವಾರ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲಿಸಿದರು
ಔರಾದ್ ತಾಲ್ಲೂಕಿನ ಭಂಡಾರಕುಮಟಾ ಗ್ರಾಮದ ರೇಷ್ಮೆ ಬೆಳೆಗಾರ ಜಾಕೀರ ಪಟೇಲ್ ಅವರ ಹೊಲಕ್ಕೆ ಭಾನುವಾರ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲಿಸಿದರು   

ಔರಾದ್: ‘ರೇಷ್ಮೆ ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲಾಗುವುದು’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ತಿಳಿಸಿದರು. ತಾಲ್ಲೂಕಿನ ಭಂಡಾರಕುಮುಟಾ ಗ್ರಾಮದಲ್ಲಿ ಭಾನುವಾರ ರೇಷ್ಮೆ ಬೆಳೆಗಾರರ ಜತೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಈ ತಾಲ್ಲೂಕಿನಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದರೂ ರೇಷ್ಮೆ ಬೆಳೆಯುವಲ್ಲಿ ಮುಂದಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ರೇಷ್ಮೆ ಉತ್ಪಾದಿಸುವಂತೆ ಅವರು ಸಲಹೆ ನೀಡಿದರು.

ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರೈತರಿಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ನೂಲು ತೆಗೆಯುವ ಯಂತ್ರ ಒದಗಿಸಲಾಗುವುದು. ಅದಕ್ಕೆ ಶೇ 60 ರಷ್ಟು ಸಹಾಯಧನ ನೀಡಲಾಗುವುದು’ ಎಂದು ಹೇಳಿದರು. ಸಂವಾದದ ನಂತರ ರೇಷ್ಮೆ ಮಂಡಳಿ ಅಧ್ಯಕ್ಷರು ರೈತ ಜಾಕೀರ್ ಪಟೇಲ್ ಅವರ ಹೊಲಕ್ಕೆ ಭೇಟಿ ನೀಡಿ ರೇಷ್ಮೆ ಗೂಡು ವೀಕ್ಷಣೆ ಮಾಡಿದರು.

ADVERTISEMENT

ರೇಷ್ಮೆ ವಿಜ್ಞಾನಿ ಡಾ. ಸತ್ಯನಾರಾಯಣ, ಎಂ.ಆರ್. ಇಟಗಿ, ಡಾ.ಜವಳಿ, ವಿಶೇಷ ಅಧಿಕಾರಿ ಮುಕುಂದ ಕ್ರಿಸೂರ್, ರೇಷ್ಮೆ ಸಹಾಯಕ ನಿರ್ದೇಶಕ ಭೀಮೇಶ್, ಪ್ರಗತಿಪರ ರೈತ ತೇಜರಾವ ಮುಳೆ, ಜಾಕೀರ್ ಪಟೇಲ್, ಉಮಾಕಾಂತ ಸ್ವಾಮಿ, ವಿಠಲ್ ಜೀರ್ಗೆ, ಮುಕುಂದ ರಾಠೋಡ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.