ADVERTISEMENT

‘ಬಾಂಧವ್ಯ ವೃದ್ಧಿ ಧರ್ಮದ ತಿರುಳು’

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 6:47 IST
Last Updated 6 ಜುಲೈ 2015, 6:47 IST

ಬಸವಕಲ್ಯಾಣ: ಪರಸ್ಪರರಲ್ಲಿ ಬಾಂಧವ್ಯ ಬೆಸೆಯುವುದೇ ಧರ್ಮದ ತಿರುಳು ಎಂದು ಮೌಲಾನಾ ಫಯಾಮುದ್ದೀನ್ ಸಾಬ್ ಹೇಳಿದರು. ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ರಂಜಾನ್ ನಿಮಿತ್ತ ಶನಿವಾರ  ಆಯೋಜಿಸಿದ್ದ ಇಫ್ತಾರ್‌ ಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಸ್ಲಾಂ ಧರ್ಮವು ಶಾಂತಿ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತರಿಸುತ್ತದೆ. ಕುರಾನ್‌ನಲ್ಲಿ ಮಾನವನ ಒಳಿತಿಗಾಗಿ ಸಂದೇಶ ಸಾರಲಾಗಿದೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಬಿ. ನಾರಾಯಣರಾವ, ಗೋರಟಾ ಸಂಸ್ಥಾನದ ಡಾ. ರಾಜಶೇಖರ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪ್ರಾಚಾರ್ಯ ನಿಜಾಮುದ್ದೀನ್, ವಕೀಲರ ಸಂಘದ ಅಧ್ಯಕ್ಷ ಜಿ.ಪಿ.ಗುರ್ಜರ್ ಮಾತನಾಡಿದರು.

ಡಾ.ಜಿ.ಎಸ್.ಭುರಳೆ, ಸಿಪಿಐ ಟಿ. ಸಂಜೀವಕುಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದಿಲೀಪ ಸಾಗಾವೆ ಇದ್ದರು. ಜಮಾತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಯುಸೂಫೊದ್ದೀನ್ ನೀಲಂಗೆ ಸ್ವಾಗತಿಸಿದರು. ಕಲೀಮ್ ಆಬೇದ್ ನಿರೂಪಿಸಿದರು. ಮುಜಾಹಿದ ಪಾಶಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.