ADVERTISEMENT

ಚಿಕ್ಕಲ್ಲೂರು ಜಾತ್ರೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:56 IST
Last Updated 9 ಜನವರಿ 2017, 8:56 IST

ಹನೂರು: ಸಮೀಪದ ಚಿಕ್ಕಲ್ಲೂರಿನಲ್ಲಿ 5 ದಿನಗಳ ಜಾತ್ರೆಗೆ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದೆ.

ಜ.12ರಂದು ಚಂದ್ರ ಮಂಡಲೋತ್ಸವ ಜತೆಗೆ ಪ್ರಾರಂಭವಾಗಿ  ಜ.16 ರಂದು ಮುತ್ತರಾಯನ ಸೇವೆಯೊಂದಿಗೆ  ಜಾತ್ರೆಗೆ ತೆರೆ ಬೀಳಲಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ದೇವಸ್ಥಾನ ಆಡಳಿತ ಮಂಡಳಿ, ತೆಳ್ಳನೂರು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಮುಂದಾಗಿದೆ.

ಹಳೇಮಠ ಸಮೀಪದ ಬಾಣೂರು ಹಳ್ಳ ಮಳೆಯಿಲ್ಲದೆ ಬತ್ತಿದೆ. ಇದು, ಜಾತ್ರೆಗೆ ಬರುವ ಭಕ್ತರಿಗೂ ಸಮಸ್ಯೆ ಆಗಬಹುದು ಎನ್ನಲಾಗಿದೆ. ಸಮಸ್ಯೆಗೆ ಪರಿಹಾರವಾಗಿ ದೇವಸ್ಥಾನ ಆಡಳಿತ ಮಂಡಳಿ 4 ಕೊಳವೆಬಾವಿಗಳನ್ನು ಕೊರೆಯಿಸಿದೆ.

ಸಾರಿಗೆ ಹಾಗೂ ಆರೋಗ್ಯ ವ್ಯವಸ್ಥೆ ಇರಲಿದ್ದು, ಹೆಚ್ಚುವರಿ ಶೌಚಾಲಯ, ತಾತ್ಕಾಲಿಕ ಆರೋಗ್ಯ ಶಿಬಿರ ನಿರ್ಮಿಸಲಾಗಿದೆ. ಕೊಳ್ಳೇಗಾಲದಿಂದ ಖಾಸಗಿ ಬಸ್ಸುಗಳ ಸೇವೆ ಹೊರತುಪಡಿಸಿ 150ಕ್ಕೂ ಹೆಚ್ಚು ಸಾರಿಗೆ ಬಸ್ಸುಗಳನ್ನು ಜಾತ್ರಾ ಅನ್ವಯ ಸಂಚರಿಸಲಿವೆ. ಚಂದ್ರಮಂಡಲೋತ್ಸವಕ್ಕೆ ತೊಡಕು ಆಗುತ್ತಿದೆ ಎಂದು ಗದ್ದುಗೆ ಯಿಂದ 100 ಮೀ ವ್ಯಾಪ್ತಿಯಲ್ಲಿ ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.