ADVERTISEMENT

ಜಿಲ್ಲೆಯಲ್ಲಿ ನಾಲ್ವರ ನಾಮಪತ್ರಗಳು ತಿರಸ್ಕೃತ

ಗುಂಡ್ಲುಪೇಟೆಯಲ್ಲಿ 2, ಚಾಮರಾಜನಗರ, ಕೊಳ್ಳೇಗಾಲ, ಹನೂರಿನಲ್ಲಿ ತಲಾ ಒಂದು ನಾಮಪತ್ರ ಅಸಿಂಧು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:11 IST
Last Updated 26 ಏಪ್ರಿಲ್ 2018, 9:11 IST

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದ 53 ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಉಳಿದ 49 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತ ಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ಎಚ್.ಎಂ.ಮಾದೇಶ್ ಎಂಬುವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ, 15 ಜನರ ನಾಮಪತ್ರ ಕ್ರಮಬದ್ಧವಾಗಿದೆ.

ಅಭ್ಯರ್ಥಿಗಳ ವಿವರ: ಸಿ.ಪುಟ್ಟರಂಗಶೆಟ್ಟಿ- ಕಾಂಗ್ರೆಸ್, ಕೆ.ಆರ್.ಮಲ್ಲಿಕಾರ್ಜುನಪ್ಪ-ಬಿಜೆಪಿ, ಎ.ಎಂ.ಮಲ್ಲಿಕಾರ್ಜುನ ಸ್ವಾಮಿ-ಬಹುಜನ ಸಮಾಜ ಪಾರ್ಟಿ, ಎಸ್.ಗಣೇಶ್- ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ಡಿ.ನಾಗಸುಂದರ -ಭಾರತೀಯ ರಿಪಬ್ಲಿಕನ್ ಪಕ್ಷ, ನಾರಾಯಣ ಸ್ವಾಮಿ.ಜೆ-ಸಾಮಾನ್ಯ ಜನತಾ ಪಾರ್ಟಿ(ಲೋಕ ತಾಂತ್ರಿಕ್), ವಾಟಾಳ್ ನಾಗರಾಜ್-ಕನ್ನಡ ಚಳವಳಿ ವಾಟಾಳ್ ಪಕ್ಷ, ಶ್ರೀಕಂಠಸ್ವಾಮಿ-ಶಿವಸೇನ, ಎಂ.ಆರ್ ಸರಸ್ವತಿ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಎಂ.ಚಿನ್ನಸ್ವಾಮಿ-ಪಕ್ಷೇತರ, ಪ್ರಸನ್ನ ಕುಮಾರ್.ಬಿ- ಪಕ್ಷೇತರ, ಎಂ.ಎಸ್.ಮಲ್ಲಿಕಾರ್ಜುನ್-ಪಕ್ಷೇತರ, ರಂಗಸ್ವಾಮಿ-ಪಕ್ಷೇತರ, ಸುರೇಶ.ಬಿ.ಎನ್-ಪಕ್ಷೇತರ, ಎಂ.ಹೊನ್ನೂರಯ್ಯ-ಪಕ್ಷೇತರ.

ADVERTISEMENT

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ಬಿ.ನಿಂಗರಾಜು ಎಂಬುವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ, 8 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದೆ

ಅಭ್ಯರ್ಥಿಗಳು: ಎ.ಆರ್.ಕೃಷ್ಣಮೂರ್ತಿ-ಕಾಂಗ್ರೆಸ್, ಜಿ.ಎನ್ ನಂಜುಂಡಸ್ವಾಮಿ-ಬಿಜೆಪಿ, ಎನ್.ಮಹೇಶ್-ಬಹುಜನ ಸಮಾಜ ಪಕ್ಷ, ಚಿಕ್ಕಸಾವಕ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅ.), ನಿಂಗರಾಜ್.ಜಿ-ರಿಪಬ್ಲಿಕನ್ ಸೇನೆ, ಲಕ್ಷ್ಮಿಜಯಶಂಕರ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ನಾಗರತ್ನ ಎಂ-ಪಕ್ಷೇತರ, ಎಂ.ರಾಜೇಶ್-ಪಕ್ಷೇತರ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ಎನ್.ಡಿ.ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಂ.ಮನಸ್ ಎಂಬುವರು ಸಲ್ಲಿಸಿದ್ದ ನಾಮ ಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ 9 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದೆ.

ಅಭ್ಯರ್ಥಿಗಳು: ಎಸ್.ಗುರುಪ್ರಸಾದ್-ಬಹುಜನ ಸಮಾಜ ಪಾರ್ಟಿ, ಸಿ.ಎಸ್.ನಿರಂಜನ್ ಕುಮಾರ್-ಬಿಜೆಪಿ, ಎಂ.ಸಿ.ಮೋಹನ್ ಕುಮಾರಿ ಉರುಫ್ ಗೀತಾ-ಕಾಂಗ್ರೆಸ್, ಸಿ.ಜೆ ಕಾಂತರಾಜ-ಪ್ರಜಾ ಪರಿವರ್ತನ ಪಾರ್ಟಿ, ಎ.ಜಿ.ರಾಮಚಂದ್ರರಾವ್-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ದುಂಡಯ್ಯ-ಪಕ್ಷೇತರ, ಮಹೇಶ.ಜಿ-ಪಕ್ಷೇತರ, ಬಿ.ಸಿ.ಶೇಖರರಾಜು-ಪಕ್ಷೇತರ, ಬಿ.ಸಿದ್ದಯ್ಯ-ಪಕ್ಷೇತರ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ಎಲ್ಲರ ನಾಮಪತ್ರಗಳು ಕ್ರಮಬದ್ಧವಾಗಿದೆ. ಆದರೆ, 2 ನಾಮಪತ್ರ ಸಲ್ಲಿಸಿದ್ದ ಪರಿಮಳ ನಾಗಪ್ಪ ಅವರ ಒಂದು ನಾಮಪತ್ರ ತಿರಸ್ಕೃತಗೊಂಡಿದೆ.

ಅಭ್ಯರ್ಥಿಗಳು: ಆರ್.ನರೇಂದ್ರ- ಕಾಂಗ್ರೆಸ್, ಪ್ರೀತನ್ ಕೆ.ಎನ್.-ಬಿಜೆಪಿ ಎಂ.ಆರ್.ಮಂಜುನಾಥ್-ಜೆಡಿಎಸ್‌, ಎಸ್.ಗಂಗಾಧರ-ಲೋಕ್ ಆವಾಜ್ ದಳ್, ಪ್ರದೀಪ್ ಕುಮಾರ್ ಎಂ.-ಆಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಬಿ.ಭಾನುಪ್ರಕಾಶ್-ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ, ಆರ್.ಪಿ.ವಿಷ್ಣುಕುಮಾರ್-ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್, ಡಿ.ಶ್ರೀಕಂಠಸ್ವಾಮಿ-ಸ್ವರಾಜ್ ಇಂಡಿಯಾ, ಜೆ.ಜಯಪ್ರಕಾಶ್- ಪಕ್ಷೇತರ, ಜಾನ್ ಡಾನ್ ಬೋಸ್ಕೋ.ಕೆ-ಪಕ್ಷೇತರ, ಕೆ.ಎಸ್.ಪರಿಮಳ ನಾಗಪ್ಪ-ಪಕ್ಷೇತರ, ಮಹೇಶ-ಪಕ್ಷೇತರ, ಆರ್.ಮಹೇಶ-ಪಕ್ಷೇತರ, ಸಿದ್ದಪ್ಪ.ಆರ್-ಪಕ್ಷೇತರ, ಕೆ.ಸಿದ್ಧರಾಜು-ಪಕ್ಷೇತರ, ಸೆಲ್ವರಾಜ್.ಎಸ್-ಪಕ್ಷೇತರ, ಜ್ಞಾನಪ್ರಕಾಶ್.ಜೆ-ಪಕ್ಷೇತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.