ADVERTISEMENT

ಪಕ್ಷಿಸಂಕುಲ ಸಂರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 11:41 IST
Last Updated 23 ಜನವರಿ 2017, 11:41 IST
ಪಕ್ಷಿಸಂಕುಲ ಸಂರಕ್ಷಣೆಗೆ ಸಲಹೆ
ಪಕ್ಷಿಸಂಕುಲ ಸಂರಕ್ಷಣೆಗೆ ಸಲಹೆ   

ಚಾಮರಾಜನಗರ: ‘ವಿನಾಶದ ಅಂಚಿ ನಲ್ಲಿರುವ ಪಕ್ಷಿಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪಕ್ಷಿ ದಿನಾ ಚರಣೆಯಲ್ಲಿ ಅವರು ಮಾತನಾಡಿದರು.

ಮಾನವನ ಅಭಿವೃದ್ಧಿಗೆ ಪಕ್ಷಿಗಳು ಪೂರಕವಾಗಿವೆ. ಅವುಗಳ ಸಂರಕ್ಷಣೆ ಗಾಗಿ ಗಿಡ, ಮರ ಬೆಳೆಸಬೇಕು. ವಿನಾಶದ ಅಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚಿದೆ ಎಂದು ಹೇಳಿದರು.  

ಬೀಸಣಿಕೆ ಬಾಲದ ಕಾಜಾಣ ಪಕ್ಷಿಯು ಬೇರೆ ಪಕ್ಷಿಗಳಂತೆ ಸ್ವರ ಹೊರಡಿ ಸುವ ಪಕ್ಷಿಯಾಗಿದೆ. ಹೆಚ್ಚಿನ ಪಕ್ಷಿಗಳು ಸಂತಾನಾಭಿವೃದ್ಧಿಗೆ ಸೂಕ್ತ ಸ್ಥಳ ಹುಡುಕಿ ಕೊಂಡು ವಲಸೆ ಬರುತ್ತವೆ. ಕೆಲವು ಪಕ್ಷಿಗಳು ಚಳಿಗಾಲ ಕಳೆಯಲು ವಲಸೆ ಬರುತ್ತವೆ ಎಂದು ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕು ಕೂಡ ಪಕ್ಷಿ ಗಳ ಮೆಚ್ಚಿನ ವಲಸೆಯ ತಾಣ ವಾಗಿದೆ. ಪ್ರಸ್ತುತ ತಾಲ್ಲೂಕಿಗೆ ನವರಂಗ, ಬಿಳಿತಲೆಯ ಮೈನಾ ಪಕ್ಷಿಗಳು ವಲಸೆ ಬಂದಿವೆ ಎಂದ ಅವರು, ಅವುಗಳ ಚಿತ್ರ ಪ್ರದರ್ಶಿಸಿದರು.

ಮುಖ್ಯಶಿಕ್ಷಕಿ ಸವಿತಾ ಮಾತನಾಡಿ, ಹಕ್ಕಿಗಳ ಉಳಿವಿಗೆ ವಿದ್ಯಾರ್ಥಿಗಳು ಮುಂದಾಗಬೇಕು. ಎಂದು ಸಲಹೆ ನೀಡಿದರು. ಇದೇ ವೇಳೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸಸಿ ನೆಡಲಾ ಯಿತು. ಶಾಲೆಯ ಆವರಣದಲ್ಲಿ ನಡೆದ ಪಕ್ಷಿಗಳ ಗಣತಿಯ ವಿವರ ನೀಡಿ 33 ಪಕ್ಷಿಗಳ ಪರಿಚಯವುಳ್ಳ ಕಿರುಹೊತ್ತಿಗೆ ಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎರಡೂ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.