ADVERTISEMENT

ಬಾಲ್ಯ ವಿವಾಹ ನಿಷೇಧ: ಪ್ರಚಾರಾಂದೋಲನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:19 IST
Last Updated 4 ಮೇ 2017, 7:19 IST

ಚಾಮರಾಜನಗರ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ‘ಮನನ’ ಎಂಬ ವಿನೂತನ ಪ್ರಚಾರಾಂದೋಲನ ವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದಿಂದ ಹಮ್ಮಿಕೊಳ್ಳಲಾಗಿದೆ.

ಪ್ರತಿ ತಾಲ್ಲೂಕಿಗೆ ಸರ್ಕಾರಿ ಬಾಲ ಮಂದಿರದ ಒಂದು ಮಗುವನ್ನು ರಾಯ ಭಾರಿಯನ್ನಾಗಿ ಆಯ್ಕೆ ಮಾಡಿಕೊಂಡು ಮನೆಗಳಿಗೆ ಭೇಟಿ ನೀಡಿ ಬಾಲ್ಯ ವಿವಾಹ ನಿಷೇಧ ಕುರಿತ ಪ್ರಚಾರಾಂದೋಲನ ನಡೆಸಲಾಗುತ್ತಿದೆ.

ಮೇ 4ರಂದು ಹನೂರು ಭಾಗದ ಎಲ್ಲೆಮಾಳ ವ್ಯಾಪ್ತಿಯ ಚಂಗವಾಡಿ, ಮೇ 5ರಂದು ಕೊಳ್ಳೇಗಾಲ ತಾಲ್ಲೂ ಕಿನ ಲಕ್ಷ್ಮಿಪುರ, ಮೇ 6ರಂದು ಚಾಮರಾಜ ನಗರ ತಾಲ್ಲೂಕಿನ ಸಂತೇಮರಹಳ್ಳಿ ಮೋಳೆ, ಹೊಸ ಮೋಳೆ, ನಡುಕಲ ಮೋಳೆ, ಮೇ 8ರಂದು ಯಳಂದೂರು ತಾಲ್ಲೂಕಿನ ಕಂದಹಳ್ಳಿ, ಮೇ 9ರಂದು ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳ್ಳಿ, ಸೋಲಿಗರ ಬೀದಿ, ಅರೆಪಾಳ್ಯದಲ್ಲಿ ಜಾಗೃತಿ ಮೂಡಿಸಲಾಗುವುದು.

ಮೇ 10ರಂದು ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದಹುಂಡಿ, ಮಾದ ಯ್ಯನಹುಂಡಿ, ಮೇ 11ರಂದು ಹನೂರು ಭಾಗದ ಕಾಂಚಳ್ಳಿ, ಮೇ 12ರಂದು ಚಾಮರಾಜನಗರ ತಾಲ್ಲೂ ಕಿನ ಬಡಗಲಮೋಳೆ, ತೆಂಕಲ ಮೋಳೆ, ಮೇ 15ರಂದು ಯಳಂದೂರು ತಾಲ್ಲೂ ಕಿನ ಮಲಾರಪಾಳ್ಯ, ಟಿ. ಹೊಸೂರು, ಮೇ 16ರಂದು ಕೊಳ್ಳೇಗಾಲ ತಾಲ್ಲೂ ಕಿನ ಚಿಕ್ಕಿಂದು ವಾಡಿ, ಮೇ 17ರಂದು ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡುಂಡಿ, ಚಿಕ್ಕುಂಡಿ, ಹಿರೀಕಾಟಿ, ಮೇ 18ರಂದು ಹನೂರು ಭಾಗದ ಪೊನ್ನಾಚಿ ಬಳಿ ಇರುವ ಎಲ್ಲ ಹಾಡಿಗಳು ಪ್ರಚಾ ರಾಂದೋಲನ ನಡೆಯಲಿದೆ.

ಮೇ 19ರಂದು ಚಾಮರಾಜ ನಗರ ತಾಲ್ಲೂಕಿನ ಹೊಸಪೋಡು, ಮೂಕನ ಪಾಳ್ಯ, ಕೋಳಿಪಾಳ್ಯ, ಬೂತಾನ ಪೋಡು, ಮಾರಿಗುಡಿ ಪೋಡು, ಹೊಸ ಗೋಡೆ ಮದುವಿನ ಹುಂಡಿ, ಕನೇರ ಕಾಲೊನಿ, ಮೇ 20ರಂದು ಯಳಂ ದೂರು ತಾಲ್ಲೂಕಿನ ಉಪ್ಪಿನಮೋಳೆ, ಮೇ 22ರಂದು ಗುಂಡ್ಲುಪೇಟೆ ತಾಲ್ಲೂ ಕಿನ ತೆಂಕಲ ಹುಂಡಿ, ಮಾಡ್ರಳ್ಳಿ, ಮೇ 23ರಂದು ಹನೂರು ಭಾಗದ ಬೂದಿ ಪಡಗ, ಹುಂಡೀಪಾಳ್ಯ

, ಮೇ 24ರಂದು ಚಾಮರಾಜನಗರ ತಾಲ್ಲೂಕಿನ ಸಾಗಡೆ, ಕೆಂಗಾಕಿ, ಬೆಟ್ಟದಪುರ, ಮೇ 25ರಂದು ಯಳಂದೂರು ತಾಲ್ಲೂಕಿನ ಅಗರ, ಕಿನಕ ನಹಳ್ಳಿ, ಮಾಂಬಳ್ಳಿ, ಮೇ 26ರಂದು ಕೊಳ್ಳೇಗಾಲ ತಾಲ್ಲೂ ಕಿನ  ಬೂದಿಗಟ್ಟ ದೊಡ್ಡಿ ಗ್ರಾಮದ ಬಳಿ,

ಮೇ 27ರಂದು ಯಳಂದೂರು ತಾಲ್ಲೂಕಿನ ವೈ.ಕೆ. ಮೋಳೆ, ಗುಂಡ್ಲು ಪೇಟೆ ತಾಲ್ಲೂಕಿನ ಬೋಗಯ್ಯನ ಹುಂಡಿ, ಕುರುಬರಹುಂಡಿ ಹುಗ್ಗೀಸ್ ಕಾಲೊನಿ, ಮೇ 28ರಂದು ಹನೂರು ಭಾಗದ ಪಿ.ಜಿ.ಪಾಳ್ಯದ ಹತ್ತಿರ ವಿರುವ ಹಾಡಿಗಳಲ್ಲಿ ಪ್ರಚಾರಾಂ ದೋಲನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.